ಭಯೋತ್ಪಾದನೆ ಕೃತ್ಯ ಎಸಗುವವರು ಯಾವುದೇ ಜಾತಿ, ಧರ್ಮರಾಗಿದ್ದರೂ ಎನ್‍ಕೌಂಟರ್ ಮಾಡಿ : ಈಶ್ವರಪ್ಪ

ಶಿವಮೊಗ್ಗ,ನ.21- ಈ ಮಣ್ಣಿನ ಅನ್ನ ತಿಂದು ಭಯೋತ್ಪಾದನೆ ಕೃತ್ಯ ನಡೆಸುವ ಯಾರೇ ಆಗಲಿ ಅವರನ್ನು ನಿರ್ಧಾಕ್ಷಿಣ್ಯವಾಗಿ ಎನ್‍ಕೌಂಟರ್ ಮಾಡಬೇಕೆಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ. ಭಯೋತ್ಪಾದನೆ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ವ್ಯಕ್ತಿಯ ಜಾತಿ, ಧರ್ಮ ಹಿನ್ನೆಲೆ ನೋಡದೆ ಅಂಥವರನ್ನು ನಿರ್ಧಾಕ್ಷಿಣ್ಯವಾಗಿ ಬಗ್ಗುಬಡಿಯಬೇಕು. ಇಲ್ಲದಿದ್ದರೆ ಇಂಥವರಿಂದ ದೇಶಕ್ಕೆ ಆಪತ್ತು ಎಂದು ಆತಂಕ ವ್ಯಕ್ತಪಡಿಸಿದರು. ಇಂಥವರನ್ನು ಸಾರ್ವಜನಿಕವಾಗಿ ನೇಣು ಹಾಕಬೇಕು ಇಲ್ಲವೇ ಎನ್‍ಕೌಂಟರ್ ಮಾಡಬೇಕು. ಹಾಗಿದ್ದರೆ ಮಾತ್ರ ಇಂಥ ಪ್ರಕರಣಗಳು ಕಡಿಮೆಯಾಗಬಹುದು. ಕೇವಲ ತನಿಖೆ , ಬಂಧನವಾದರೆ ಮತ್ತೆ ಮತ್ತೆ […]

ಭಾರತ-ಬಾಂಗ್ಲಾ ಗಡಿಯಲ್ಲಿ ಅಕ್ರಮ ವಲಸೆ ತಡೆಗೆ ವ್ಯಾಪಕ ಕ್ರಮ : ಗೃಹ ಸಚಿವಾಲಯ

ನವದೆಹಲಿ, ನ.14-ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಅಕ್ರಮ ವಲಸೆ ಮತ್ತು ಗಡಿಯಾಚೆಗಿನ ಚಟುವಟಿಕೆಗಳು ಪ್ರಮುಖ ಸವಾಲುಗಳಾಗಿವೆ, ಇದು ಉನ್ನತ ಮಟ್ಟದ ಸರಂಧ್ರತೆಯಿಂದ ಗುರುತಿಸಲ್ಪಟ್ಟಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಭಾರತ-ಬಾಂಗ್ಲಾದೇಶದ ಗಡಿಯ ಒಟ್ಟು ಉದ್ದ 4,096.7 ಕಿಮೀ, ಅದರಲ್ಲಿ 3,145 ಕಿಮೀ ಭೌತಿಕ ಬೇಲಿಯಿಂದ ಆವರಿಸಲ್ಪಟ್ಟಿದೆ ಮತ್ತು ಉಳಿದ ಪ್ರದೇಶದಲ್ಲಿ ತಡೆಬೇಲಿಯಿಂದ ಮುಚ್ಚಲು ಯೋಜಿಸಲಾಗಿದೆ ಎಂದು ಹೇಳಿದೆ. ಕಳೆದ 2021-22ರ ಕೇಂದ್ರ ಗೃಹ ಸಚಿವಾಲಯದ ವಾರ್ಷಿಕ ವರದಿಯ ಪ್ರಕಾರ, ಇಂಡೋ-ಬಾಂಗ್ಲಾದೇಶದ ಗಡಿಯು ಹೆಚ್ಚಿನ ಮಟ್ಟದ ಸರಂಧ್ರತೆಯಿಂದ ಗುರುತಿಸಲ್ಪಟ್ಟಿದೆ ಮತ್ತು […]

ದೇಶ ಬಹುತೇಕ ರಾಷ್ಟ್ರ ವಿರೋಧಿ ಚಟುವಟಿಕೆಗಳಿಂದ ಮುಕ್ತವಾಗಿದೆ : ಷಾ

ನವದೆಹಲಿ, ಅ.21-ಭಾರತದ ಆಂತರಿಕ ಭದ್ರತೆಯಲ್ಲಿ ಕೆಲವು ವರ್ಷಗಳಿಂದೀಚೆಗೆ ಸಕಾರಾತ್ಮಕ ಬದಲಾವಣೆಗಳಾಗಿದ್ದು, ದೇಶ ಬಹುತೇಕ ರಾಷ್ಟ್ರ ವಿರೋಧಿ ಚಟುವಟಿಕೆಗಳಿಂದ ಮುಕ್ತವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ. ದೆಹಲಿಯಲ್ಲಿ ಪೊಲೀಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಭಾರತದ ಭದ್ರತೆ ಹೆಮ್ಮೆಯ ಘಟ್ಟ ತಲುಪಿದೆ. ಪ್ರತಿಯೊಬ್ಬರಲ್ಲೂ ಭದ್ರತೆಯ ಸಂತೃಪ್ತ ಭಾವವಿದೆ ಎಂದು ಹೇಳಿದರು. ಚೋಲಾದೋರಾ ಧರಿಸಿ ಕೇದಾರನಾಥನ ದರ್ಶನ ಪಡೆದ ಪ್ರಧಾನಿ ಮೋದಿ ಜಮ್ಮು-ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿನ ಹಲವು ಚಟುವಟಿಕೆಗಳನ್ನು ನಿಯಂತ್ರಿಸಲಾಗಿದೆ. […]

ಕಾರಾಗೃಹಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಅಧಿಕಾರಿಗಳೇ ಹೊಣೆ

ಬೆಂಗಳೂರು, ಜು.16- ರಾಜ್ಯದ ಯಾವುದೇ ಕಾರಾಗೃಹಗಳಲ್ಲಿ ಇನ್ನು ಮುಂದೆ ಕಾನೂನು ಬಾಹಿರ ಚಟುವಟಿಕೆಗಳು ನಡೆದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆ ಮಾಡಬೇಕಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ವಿಕಾಸಸೌಧದಲ್ಲಿಂದು ಇತ್ತೀಚೆಗೆ ರಚನೆಗೊಂಡ ಕಾರಾಗೃಹ ಅಭಿವೃದ್ಧಿ ಮಂಡಳಿಯ ಮೊದಲ ಸಭೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ನಡೆಸಲಾಯಿತು. ಸಭೆಯಲ್ಲಿ ಆರಗ ಜ್ಞಾನೇಂದ್ರ ಅವರು ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿ ಅಧಿಕಾರಿಗಳ ಕಾರ್ಯ ವೈಖರಿ ವಿರುದ್ಧ […]