ಮೈಸೂರು ಮೃಗಾಲಯ ರಾಯಭಾರಿಯಾಗಿ ನಟ ದರ್ಶನ್ ನೇಮಕ

ಮೈಸೂರು, ಫೆ 17- ಮೈಸೂರು ಮೃಗಾಲಯದ ರಾಯಭಾರಿಯಾಗಿ ಚಲನಚಿತ್ರ ನಟ ಹಾಗೂ ಪ್ರಾಣಿ ಪ್ರಿಯರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೇಮಿಸಲಾಗಿದೆ. ಮೈಸೂರು ಮೃಗಾಲಯದ ರಾಯಭಾರಿಯಾಗಿ ನೇಮಿಸಿ ಹಾಗೂ ಪ್ರಾಣಿ ರಕ್ಷಣಾ ಅಭಿಯಾನದ ನೇತೃತ್ವವನ್ನು ನಟ ದರ್ಶನ್ ತೂಗುದೀಪ್ ಅವರಿಗೆ ಮೈಸೂರು ಮೃಗಾಲಯ ವಹಿಸಿದೆ.  ಈ ಸಂಬಂಧ ಕಡತವನ್ನು ಮೃಗಾಲಯದ ಅಧ್ಯಕ್ಷ ಎಲ್.ಆರ್.ಮಹದೇವ ಸ್ವಾಮಿ ಅವರು ದರ್ಶನ್‍ಗೆ ಹಸ್ತಾಂತರಿಸಿದರು.