ವಿಧಾನಪರಿಷತ್‍ನಲ್ಲಿ ನಟಿ ಭಾರ್ಗವಿ ನಾರಾಯಣ್ ಅವರಿಗೆ ಶ್ರದ್ದಾಂಜಲಿ

ಬೆಂಗಳೂರು,ಫೆ.15- ರಂಗಭೂಮಿ ಹಿರಿಯ ಕಲಾವಿದೆ ಹಾಗೂ ನಟಿ ಭಾರ್ಗವಿ ನಾರಾಯಣ್ ಅವರ ನೀಧನಕ್ಕೆ ವಿಧಾನಪರಿಷತ್‍ನಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು. ಕಲಾಪ ಆರಂಭದಲ್ಲೇ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂತಾಪ ಸೂಚನಾ ನಿರ್ಣಯ ಮಂಡಿಸಿ, 1938 ಫೆ.4ರಂದು ಜನಿಸಿದ ಭಾರ್ಗವಿ ನಾರಾಯಣ ಅವರು, ಇಂಗ್ಲೀಷ್ ಎಂಎ ಸ್ನಾತಕೋತ್ತರ ಪದವಿ ಪಡೆದಿದ್ದರು.ರಂಗಭೂಮಿ ಕಲಾವಿದರಾಗಿದ್ದಾಗಲೇ ಮೇಕಪ್ ನಾಣಿ ಎಂದೇ ಹೆಸರಾಗಿದ್ದ ಬೆಳವಾಡಿ ನಂಜುಂಡಯ್ಯ ನಾರಾಯಣ ಅವರನ್ನು ಮದುವೆಯಾದರು. 60ರ ದಶಕದಲ್ಲಿ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಪ್ರೊಫೆಸರ್ ಹುಚ್ಚರಾಯ ಚಿತ್ರದಲ್ಲಿನ ನಟನೆಗೆ 1974ರಲ್ಲಿ […]