“ಅದಾನಿ ಹಗರಣ ಮರೆ ಮಾಚಲು ಆಡಳಿತ ಪಕ್ಷದಿಂದ ಸಂಸತ್‍ನಲ್ಲಿ ಗದ್ದಲ”

ನವದೆಹಲಿ,ಮಾ.14- ಅದಾನಿ ಷೇರು ಬೆಲೆ ಏರಿಕೆಯಲ್ಲಿ ನಡೆದಿರುವ ಹಗರಣ ಹಾಗೂ ಸರ್ಕಾರದ ಪ್ರಮುಖರೊಂದಿಗೆ ಖಾಸಗಿ ಸಂಸ್ಥೆಯ ಆಪ್ತ ಸಂಬಂಧಗಳ ಕುರಿತು ಚರ್ಚೆಯಾಗಿ ಸಾರ್ವಜನಿಕರಿಗೆ ಮಾಹಿತಿ ತಿಳಿಯಬಾರದು ಎಂಬ ಕಾರಣಕ್ಕೆ ಬಿಜೆಪಿ ರಾಹುಲ್‍ಗಾಂಧಿ ಹೇಳಿಕೆಯನ್ನು ಉಭಯ ಸದನಗಳಲ್ಲಿ ಪ್ರಸ್ತಾಪಿಸಿ ಗದ್ದಲ ಎಬ್ಬಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಇಂದು ಬೆಳಗ್ಗೆ ಸಂಸತ್ ಕಲಾಪಕ್ಕೂ ಮುನ್ನಾ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನಖರ್ಗೆ ಅವರ ಮನೆಯಲ್ಲಿ ಸಭೆ ನಡೆಸಿದ 16 ವಿರೋಧ ಪಕ್ಷಗಳ ನಾಯಕರು, ಸಂಸತ್‍ನಲ್ಲಿ ಅದಾನಿ ಗುಂಪಿನ ಕುರಿತು […]