ಸಂಸತ್ ಉಭಯ ಸದನಗಳಲ್ಲಿ ಮುಂದುವರೆದ ಗದ್ದಲ : ಮತ್ತೆ ಕಲಾಪ ಮುಂದೂಡಿಕೆ

ನವದೆಹಲಿ,ಮಾ.17- ಬಜೆಟ್ ಅಧಿವೇಶನದ ಮುಂದುವರೆದ ಕಲಾಪದಲ್ಲಿ ಸತತ ಐದನೇ ದಿನವೂ ಯಾವುದೇ ಕಲಾಪ ನಡೆಯದೆ ಅಮೂಲ್ಯ ಸಮಯ ವ್ಯರ್ಥವಾಗಿದೆ. ಇಂದು ಕೂಡ ಉಭಯ ಸದನಗಳಲ್ಲಿ ಗದ್ದಲ ಮುಂದುವರೆದಿದ್ದರಿಂದ ದಿನದ ಕಲಾಪ ಮೊಟಕುಗೊಂಡಿದೆ. ಬ್ರಿಟನ್‍ನಲ್ಲಿ ರಾಹುಲ್‍ಗಾಂಧಿ ಉಪನ್ಯಾಸ ನೀಡುವಾಗ ಭಾರತದಲ್ಲಿ ಪ್ರಜಾಪ್ರಭುತ್ವ ಆಕ್ರಮಣಕ್ಕೆ ಒಳಗಾಗಿದೆ. ಸ್ವಯತ್ತ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಪ್ರತಿಪಕ್ಷಗಳನ್ನು ಹತ್ತಿಕ್ಕುತ್ತಿದೆ. ಸಂಸತ್‍ನಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ. ಮಾಧ್ಯಮಗಳು ಪ್ರತಿಪಕ್ಷಗಳ ಮಾತುಗಳನ್ನು ವರದಿ ಮಾಡದಂತೆ ಒತ್ತಡ ಹೇರಲಾಗುತ್ತಿದೆ. […]

ಅದಾನಿ ಹಗರಣದ ತನಿಖೆಗೆ ಪ್ರತಿಪಕ್ಷಗಳ ಪಟ್ಟು, ಕಲಾಪ ಮುಂದೂಡಿಕೆ

ಬೆಂಗಳೂರು,ಫೆ.7- ಅದಾನಿ ಸಮೂಹ ಸಂಸ್ಥೆಗಳಲ್ಲಿ ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಷೇರು ಹೂಡಿಕೆ ಮತ್ತು ಇತ್ತೀಚಿನ ಬೆಳವಣಿಗೆಗಳಿಂದಾಗಿರುವ ನಷ್ಟ ಕುರಿತು ಚರ್ಚೆಗೆ ಅವಕಾಶ ಕೇಳಿ ಸಂಸತ್‍ನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಇಂದೂ ಕೂಡ ಪ್ರತಿಭಟನೆ ಮುಂದುವರೆಸಿದ್ದು, ಕಲಾಪ ಎರಡು ಗಂಟೆಗಳ ಕಾಲ ಮುಂದೂಡಿಕೆಯಾಗಿತ್ತು. ಈ ನಡುವೆ ಪ್ರತಿಪಕ್ಷಗಳು ಅಧಿವೇಶನ ನಡೆಯದಿರಲು ಸರ್ಕಾರವೇ ಕಾರಣ ಎಂದು ದೂರಿವೆ. ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ಅದಾನಿ ಕಂಪೆನಿಯ ಹಗರಣವನ್ನು ಮುಂದಿಟ್ಟುಕೊಂಡು ಗದ್ದಲ ಆರಂಭಿಸಿದವು. ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಪರಿಸ್ಥಿತಿ […]

ಅದಾನಿ ಹಗರಣದ ತನಿಖೆಗೆ ಒತ್ತಾಯಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ

ನವದೆಹಲಿ,ಫೆ.6- ಅದಾನಿ ಸಮೂಹ ಸಂಸ್ಥೆಯ ಹೂಡಿಕೆ ಮತ್ತು ಸಾಲ ಹಗರಣವನ್ನು ಜಂಟಿ ಸದನ ಸಮಿತಿಯ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳು ಇಂದು ಸಂಸತ್ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸಿವೆ. ಇದೇ ವೇಳೆ ದೇಶಾದ್ಯಂತ ಕಾಂಗ್ರೆಸ್ ಎಸ್‍ಬಿಐ ಬ್ಯಾಂಕ್‍ಗಳು ಹಾಗೂ ಎಲ್‍ಐಸಿ ಶಾಖೆಗಳ ಮುಂದೆ ಪ್ರತಿಭಟನೆ ನಡೆಸಿದೆ. ಸಂಸತ್‍ನಲ್ಲಿ ಪ್ರತಿಪಕ್ಷಗಳಾಗಿರುವ 16 ಪಕ್ಷಗಳನ್ನೊಳಗೊಂಡ ಸಮನ್ವಯ ಸಮಿತಿ ಇಂದು ಬೆಳಗ್ಗೆ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಸಭೆ ನಡೆಸಿವೆ. ಡಿಎಂಕೆ, ಎನ್‍ಸಿಪಿ, ಬಿಆರ್‍ಎಸ್, […]

ಅದಾನಿ ಕಂಪೆನಿಯಲ್ಲಿ ಸರ್ಕಾರಿ ಸಂಸ್ಥೆಗಳ ಹೂಡಿಕೆ ಚರ್ಚೆಗೆ ಪ್ರತಿಪಕ್ಷಗಳು ಪಟ್ಟು

ನವದೆಹಲಿ,ಫೆ.3- ಉದ್ಯಮಿ ಗೌತಮ್ ಅದಾನಿ ಕಂಪೆನಿಯಲ್ಲಿ ಸರ್ಕಾರಿ ಸೌಮ್ಯದ ಸಂಸ್ಥೆಗಳ ಬಂಡವಾಳ ಹೂಡಿಕೆಯಿಂದಾಗಿರುವ ನಷ್ಟಗಳ ಕುರಿತು ಚರ್ಚೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿರುವುದರಿಂದ, ಸಂಸತ್‍ನ ಎರಡನೇ ದಿನದ ಕಲಾಪವೂ ವ್ಯರ್ಥವಾಗಿದೆ. ರಾಜ್ಯಸಭೆ ಮತ್ತು ಲೋಕಸಭೆ ಉಭಯ ಸದನಗಳು ಭೋಜನ ವಿರಾಮದವರೆಗೂ ಮುಂದೂಡಿಕೆಯಾಗಿವೆ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ನೇತೃತ್ವದಲ್ಲಿ ಎಲ್ಲಾ ವಿರೋಧ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿದ್ದು, ಸರ್ಕಾರದ ವಿರುದ್ಧದ ಹೋರಾಟಕ್ಕೆ ಪಣತೊಟ್ಟಿವೆ. ನಿನ್ನೆ ರಾಜ್ಯಸಭೆ ಮತ್ತು ಲೋಕಸಭೆಯ ಕಲಾಪದಲ್ಲೂ ಯಾವುದೇ ಚರ್ಚೆ ನಡೆಯದೆ ಸಮಯ ವ್ಯರ್ಥವಾಗಿತ್ತು. ಬೆಳಗ್ಗೆ […]

ಸಂಸತ್ ಉಭಯ ಸದನಗಳಲ್ಲಿ ಅದಾನಿ ಕೋಲಾಹಲ

ನವದೆಹಲಿ,ಫೆ.1- ಬಜೆಟ್ ಅಧಿವೇಶನದ ಮೊದಲ ದಿನವಾದ ಇಂದು ಸಂಸತ್ ಕಲಾಪದಲ್ಲಿ ಅದಾನಿ ಗುಂಪಿನ ಹಗರಣ ಪ್ರಸ್ತಾಪವಾಗಿ ಭಾರಿ ಕೋಲಾಹಲ ಉಂಟಾಗಿದ್ದು, ಉಭಯ ಸದನಗಳ ಕಾರ್ಯಕಲಾಪ ಮಧ್ಯಾಹ್ನದವರೆಗೆ ಮುಂದೂಡಿಕೆಯಾಗಿದೆ. ವಿರೋಧ ಪಕ್ಷಗಳು ವಿವಿಧ ಸಮಸ್ಯೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದ್ದರಿಂದಾಗಿ ಲೋಕಸಭೆಯಲ್ಲಿ ಇಂದು ಗದ್ದಲದ ವಾತವರಣ ನಿರ್ಮಾಣಗೊಂಡು ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು. ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷರಾದ ಓಂ ಬಿರ್ಲಾ ಜೋಂಬಿಯಾ ದಿಂದ ಆಗಮಿಸಿದ್ದ ನಿಯೋಗವನ್ನು ಸ್ವಾಗತಿಸಿದರು. ಬಳಿಕ ಪ್ರಶ್ನೋತ್ತರವನ್ನು ಕೈಗೆತ್ತಿಕೊಳ್ಳಲು ಮುಂದಾದರು. ಈ ಹಂತದಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್, […]