ಬೈಕ್ ಸವಾರನಿಗೆ ದೊಣ್ಣೆಯಿಂದ ಥಳಿಸಿದ ಡಿಸಿ ಅಮಾನತು

ಗುವಾಹಟಿ, ಸೆ.29- ತಪ್ಪು ಮಾರ್ಗದಲ್ಲಿ ಬರುತ್ತಿದ್ದ ಬೈಕ್ ಸವಾರನನ್ನು ದೊಣ್ಣೆಯಿಂದ ಥಳಿಸಿದ ಕಾರಣಕ್ಕೆ ಅಸ್ಸಾಂನ ಹೊಜೈ ಜಿಲ್ಲೆಯ ಜಿಲ್ಲಾಧಿಕಾರಿ (ಡಿಸಿ) ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ಅವರನ್ನು ಅಮಾನತುಗೊಳಿಸಲಾಗಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಆದೇಶದ ಮೇರೆಗೆ ಹೋಜೈ ಡಿಸಿ ಅನುಪಮ್ ಚೌಧರಿ ಮತ್ತು ಎಡಿಸಿ ರಕ್ತಿಮ್ ಬರುವಾ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಮುಖ್ಯಮಂತ್ರಿಗಳು ಖುದ್ದಾಗಿ ವೀಕ್ಷಿಸಿದ ಬಳಿಕ ಬುಧವಾರ ರಾತ್ರಿ ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ. […]