ಡ್ರಗ್ ನಶೆಯಲ್ಲಿ ಇಡೀ ಕುಟುಂಬವನ್ನೇ ಕೊಂದು ಹಾಕಿದ ಪಾಪಿ

ನವದೆಹಲಿ,ನ.23- ಮಾದಕ ದ್ರವ್ಯ ವ್ಯಸನಿಯೊಬ್ಬ ತನ್ನ ಇಡಿ ಕುಟುಂಬವನ್ನು ಬರ್ಭರವಾಗಿ ಹತ್ಯೆ ಮಾಡಿರುವ ಘಟನೆ ರಾಜಧಾನಿ ದೆಹಲಿಯನ್ನು ಬೆಚ್ಚಿ ಬೀಳಿಸಿದೆ. ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿದ್ದ ಕೇಶವ್ ತನ್ನ ಇಡಿ ಕುಟುಂಬವನ್ನು ಬಲಿ ತೆಗೆದುಕೊಂಡಿರುವ ಮಾದಕ ದ್ರವ್ಯ ವ್ಯಸನಿ ಎಂದು ಗುರುತಿಸಲಾಗಿದೆ. ಪುನರ್ವಸತಿ ಕೇಂದ್ರದಿಂದ ವಾಪಸ್ಸಾಗಿದ್ದ ಕೇಶವ್ ನಿನ್ನೆ ತಡ ರಾತ್ರಿ ತನ್ನ ಪೋಷಕರು, ಸಹೋದರಿ ಹಾಗೂ ಅಜ್ಜಿಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಕೇಶವ್ ಚೂಪಾದ ಚಾಕುವಿನಿಂದ ತನ್ನ […]