ದೆಹಲಿ ಪಾಲಿಕೆ ಸೋಲಿನ ಹೊಣೆ ಹೊತ್ತು ಬಿಜೆಪಿ ಅಧ್ಯಕ್ಷ ರಾಜೀನಾಮೆ

ನವದೆಹಲಿ,ಡಿ.10- ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತ ರಾಜೀನಾಮೆ ನೀಡಿದ್ದು, ಉಪಾಧ್ಯಕ್ಷ ವೀರೇಂದ್ರ ಸಚ್‍ದೇವ್ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ದೆಹಲಿ ಪಾಲಿಕೆಯಲ್ಲಿ ಬಿಜೆಪಿ ಸತತವಾಗಿ 5 ವರ್ಷಗಳಿಂದ ಅಧಿಕಾರ ಹಿಡಿದಿತ್ತು. ಕಳೆದ ಬುಧವಾರ ಪ್ರಕಟಿತ ಫಲಿತಾಂಶದಲ್ಲಿ ಆಪ್ ಪಕ್ಷ 134 ವಾರ್ಡ್‍ಗಳನ್ನು ಗೆದ್ದಿದ್ದು, ಬಿಜೆಪಿ 104 ಸ್ಥಾನಗಳನ್ನು ಗೆದ್ದಿದೆ. ಈ ಸೋಲಿನ ನೈತಿಕ ಹೊಣೆ ಹೊತ್ತು ಆದೇಶ್ ಗುಪ್ತ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯ ರಾಷ್ಟ್ರೀಯ […]