ಭವ್ಯ ಕರ್ನಾಟಕ ನಿರ್ಮಾಣದಲ್ಲಿಆದಿಚುಂಚನಗಿರಿ ಮಠದಿಂದ ದೊಡ್ಡ ಸಾಧನೆ

ಬೆಂಗಳೂರು, ಫೆ.14- ಆದಿಚುಂಚನಗಿರಿ ಮಠ ತನ್ನದೇ ಇತಿಹಾಸ ಹೊಂದಿದ್ದು, ಭವ್ಯ ಕರ್ನಾಟಕ ಕಟ್ಟಲು ದೊಡ್ಡ ಸಾಧನೆ ಆದಿಚುಂಚನಗಿರಿ ಮಠದಿಂದ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಅವರು ಇಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಜಗದ್ಗುರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಪಟ್ಟಾಭಿಷೇಕದ ದಶಮಾನೋತ್ಸವ ಸಮಾರಂಭ, ಬಿಜಿಎಸ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಜ್ಯೋತಿರ್ದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಪರಮಪೂಜ್ಯ ನಿರ್ಮಲಾನಂದನಾಥ ಸ್ವಾಮೀಜಿಗಳ ಪಟ್ಟಾಭಿಷೇಕವಾಗಿ ಒಂದು ದಶಕ ಕಳೆದಿದ್ದು, ಇದು ಆತ್ಮಾವಲೋಕನ ಹಾಗೂ ಸಿಂಹಾವಲೋಕನ ಮಾಡಿಕೊಳ್ಳುವ ಘಟ್ಟ. ಹತ್ತು ವರ್ಷಗಳಲ್ಲಿ […]