ಸಿದ್ದು ಆಡಳಿತದ ಹಗರಣಗಳನ್ನು CID ತನಿಖೆಗೊಳಪಡಿಸುವಂತೆ N.R.ರಮೇಶ್ ಆಗ್ರಹ

ಬೆಂಗಳೂರು,ಜ.23-ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾವಧಿಯಲ್ಲಿ ನಡೆದಿದೆ ಎನ್ನಲಾದ ಗಂಭೀರ ಸ್ವರೂಪದ 14 ಪ್ರಕರಣಗಳನ್ನು ಮರು ತನಿಖೆ ನಡೆಸುವ ಜೊತೆಗೆ ಕೂಡಲೇ ಸಿಐಡಿ ತನಿಖೆಗೂ ಆದೇಶಿಸಬೇಕೆಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ ಅಧ್ಯಕ್ಷ ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2013 ರಿಂದ 2018 ರವರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತವಿತ್ತು. ಈ ಸಂದರ್ಭದಲ್ಲಿ 121 ಬೃಹತ್ ಹಗರಣಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ದಾಖಲೆಗಳ ಸಹಿತ […]

ಕರಾವಳಿ ಭಾಗದಲ್ಲಿ ಹಂದಿಜ್ವರ ಹಾವಳಿ, ಎಚ್ಛೆತ್ತುಕೊಂಡ ಜಿಲ್ಲಾಡಳಿತ

ಮಂಗಳೂರು,ನ.5- ದಕ್ಷಿಣ ಕರಾವಳಿ ಭಾಗದಲ್ಲಿ ಹಂದಿಜ್ವರ ನಿಯಂತ್ರಣಕ್ಕೆ ಜಿಲ್ಲಾಡಳಿತ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಕೆಲಾರೈ ಸಮೀಪ ನೀರಂಮಾರ್ಗ ಗ್ರಾಮದ ಹಂದಿ ಸಾಗಾಣಿಕೆ ಕೇಂದ್ರದಲ್ಲಿ ಹಂದಿಜ್ವರ ಕಾಣಿಸಿಕೊಂಡಿದ್ದು ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ತುರ್ತು ಕ್ರಮಗಳನ್ನು ಕೈಗೊಂಡಿದೆ. ಜಿಲ್ಲಾಧಿಕಾರಿ ಎಂಆರ್ ರವಿಕುಮಾರ್ ಈ ಬಗ್ಗೆ ಹೇಳಿಕೆ ನೀಡಿದ್ದು, ಆತಂಕಪಡುವ ಅಗತ್ಯವಿಲ್ಲ. ಹಂದಿಜ್ವರ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದಿಲ್ಲ. ಸರಿಯಾಗಿ ಬೇಯಿಸಿದ ಹಂದಿ ಮಾಂಸ ಸೇವನೆಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಹುಲಿ ಎಂದೂ ಹುಲ್ಲು ತಿನ್ನಲ್ಲ : ಸ್ವಪಕ್ಷೀಯರ ವಿರುದ್ಧವೇ ರೆಡ್ಡಿ ಕೆಂಡಾಮಂಡಲ […]