ಏರ್ ಷೋ ಸಂದರ್ಭದಲ್ಲಿ ಮಾನ ಹರಾಜಾಗದಂತೆ ನೋಡಿಕೊಳ್ಳಲು ಬಿಬಿಎಂಪಿ ಸಿದ್ಧತೆ

ಬೆಂಗಳೂರು,ಜ.27- ನಗರದಲ್ಲಿ ನಡೆಯಲಿರುವ ವೈಮಾನಿಕ ಪ್ರದರ್ಶನ ಸಂದರ್ಭದಲ್ಲಿ ತನ್ನ ಮಾನ ಹರಾಜಾಗದಂತೆ ನೋಡಿಕೊಳ್ಳಲು ಬಿಬಿಎಂಪಿ ಮುಂಜಾಗೃತೆ ವಹಿಸಿದೆ. ಕಳೆದ ಬಾರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಹಾಕಲಾದ ರಸ್ತೆಗಳು ಮೂರೇ ದಿನಗಳಲ್ಲಿ ಹಾಳಾಗಿ ಹೋಗಿದ್ದರಿಂದ ಬೆಂಗಳೂರಿನ ಮಾನ ಹರಾಜಾಗಿತ್ತು. ಈ ಘಟನೆ ನಂತರ ಎಚ್ಚೆತ್ತಿರುವ ಬಿಬಿಎಂಪಿ ಏರ್ ಷೋ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ನಡೆಸುವ ಮೂಲಕ ಮಾನ ಮತ್ತೆ ಹರಾಜಾಗದಂತೆ ನೋಡಿಕೊಳ್ಳಲು ಮುಂದಾಗಿದೆ. ಏರ್ ಷೋ ಮೂಲಭೂತ ಸೌಕರ್ಯ ಕಲ್ಪಿಸಲು […]