ಪ್ರಧಾನಿ ಭದ್ರತೆ ಲೋಪವಾದ ಅಣತಿ ದೂರದಲ್ಲೇ ಪಾಕ್ ದೋಣಿ ಪತ್ತೆ..!

ನವದೆಹಲಿ, ಜ.8- ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತಾ ಲೋಪ ಪ್ರಕರಣದ ಕುರಿತು ತನಿಖೆ ನಡೆಯುತ್ತಿರುವಾಗಲೇ ಭದ್ರತಾ ಲೋಪವೆಸಗಲಾಗಿದ್ದ ಪಂಜಾಬ್‍ನ ಫಿರೋಜ್‍ಪುರ್ ಜಿಲ್ಲೆಯ ಗಡಿಭಾಗದ ಔಟ್‍ಪೋಸ್ಟ್ ಬಳಿ ಪಾಕಿಸ್ತಾನದ ಬೋಟ್ ಪತ್ತೆಯಾಗಿದ್ದು, ಅದನ್ನು ಬಿಎಸ್‍ಎಫ್ ವಶಕ್ಕೆ ಪಡೆದುಕೊಂಡಿದೆ. ಫಿರೋಜ್‍ಪುರ್ ಪಾಕಿಸ್ತಾನದ ಗಡಿಗೆ ಹೊಂದಿಕೊಂಡಂತಿರುವ ಪಂಜಾಬ್ ಪ್ರಾಂತ್ಯದ ಜಿಲ್ಲೆಯಾಗಿದ್ದು, ಭದ್ರತೆ ವಿಚಾರದಲ್ಲಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಈ ಮೊದಲು ಪಾಕಿಸ್ತಾನದ ಹಲವು ಡ್ರೋಣ್‍ಗಳು ಈ ಜಿಲ್ಲೆಯಲ್ಲಿ ಹಾರಾಡುತ್ತಿದ್ದು, ಬಿಎಸ್‍ಎಫ್ ಯೋಧರು ಹಲವು ಬಾರಿ ಈ ಡ್ರೋಣ್‍ಗಳನ್ನು ಹೊಡೆದುರುಳಿಸಿದ್ದರು. ಗಡಿಯಲ್ಲಿರುವ […]