ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ ಸಮಸ್ಯೆ ಪರಿಹಾರ

ಬೆಂಗಳೂರು,ಮಾ.19- ಕೆಲವು ಜನರು ಒಳಚರಂಡಿ ಮಾರ್ಗವನ್ನು ಮಣ್ಣು ಹಾಕಿ ಮುಚ್ಚಿದ್ದರಿಂದ ಶುಕ್ರವಾರ ಸುರಿದ ಮಳೆಗೆ ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ಹೈವೇ ಮುಳುಗಡೆಯಾಗಿತ್ತು. ತುರ್ತು ಕಾಮಗಾರಿ ನಡೆಸಿದ್ದು, ಸಮಸ್ಯೆ ಬಗೆಹರಿಸಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಸ್ಪಷ್ಟನೆ ನೀಡಿದೆ. ಶುಕ್ರವಾರ ರಾತ್ರಿ ಅಕ ಮಳೆ ಸುರಿದಿದೆ. ಸಾಮಾನ್ಯ 0.1 ಮಿ.ಮೀ ಬದಲಾಗಿ 3.9 ಮಿ ಮೀ ಮಳೆಯಾಗಿದೆ. ಪರಿಣಾಮ ಪ್ರಾಣಿಗಳ ಓಡಾಟಕ್ಕಾಗಿ ನಿರ್ಮಿಸಿರುವ ಮೇಲ್ಸೇತುವೆಯ ಕೆಳಗೆ (ಕಿಲೋ ಮೀಟರ್ 42.640 ರಲ್ಲಿ) ಜನರು ಒಳಚರಂಡಿ ಮಾರ್ಗವನ್ನು ನಿರ್ಬಂಧಿಸಿದ್ದರಿಂದ ಮುಳುಗಡೆಯಾಗಿದೆ. […]

ಅಮಿತ್ ಶಾ ಭೇಟಿಯಾದ ರಾಮ್‍ಚರಣ್, ಚಿರಂಜಿವಿ

ನವದೆಹಲಿ,ಮಾ.18-ಆರ್‍ಆರ್‍ಆರ್ ಚಿತ್ರದ ನಾಯಕ ರಾಮ್‍ಚರಣ್ ಹಾಗೂ ಅವರ ತಂದೆ ಮೆಗಾಸ್ಟಾರ್ ಚಿರಂಜಿವಿ ಅವರು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿರುವುದು ಕುತೂಹಲ ಕೆರಳಿಸಿದೆ. ಆರ್‍ಆರ್‍ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿಗೆ ಪಾತ್ರವಾಗಿದ್ದು, ಪ್ರಶಸ್ತಿ ಸ್ವೀಕರಿಸಿದ ನಂತರ ಭಾರತಕ್ಕೆ ಹಿಂತಿರುಗಿರುವ ರಾಮ್‍ಚರಣ್ ಅವರು ತಮ್ಮ ತಂದೆ ಚಿರಂಜಿವಿ ಅವರೊಂದಿಗೆ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ರಾಮ್ ಚರಣ್ ಅವರು ಗೃಹ ಸಚಿವರಿಗೆ ಪುಷ್ಪಗುಚ್ಛ ಮತ್ತು ಸಾಂಪ್ರದಾಯಿಕ ರೇಷ್ಮೆ ಶಾಲು ನೀಡಿ ಸ್ವಾಗತಿಸಿದರು. ಅಮಿತ್ ಶಾ […]

ಮಗುವನ್ನು ನಿಲ್ದಾಣದಲ್ಲೇ ಬಿಟ್ಟು ವಿಮಾನ ಹತ್ತಲು ಮುಂದಾದ ದಂಪತಿ

ಟೆಲ್‍ಅವಿವ್,ಫೆ.2- ವಿಮಾನಪ್ರಯಾಣದ ಸಂದರ್ಭದಲ್ಲಿ ಮಗುವಿಗೆ ಟಿಕೆಟ್ ಇಲ್ಲದ ದಂಪತಿ ತಮ್ಮ ಕರುಳ ಕುಡಿಯನ್ನೇ ನಿಲ್ದಾಣದಲ್ಲಿ ಬಿಟ್ಟು ಫ್ಲೈಟ್ ಹತ್ತಲು ಹೋದ ವಿಲಕ್ಷಣ ಘಟನೆ ಇಸ್ರೇಲ್‍ನಲ್ಲಿ ನಡೆದಿದೆ. ದಂಪತಿ ಬೆಲ್ಜಿಯಂನ ಬ್ರಸೆಲ್ಸ್‍ಗೆ ಪ್ರಯಾಣ ಬೆಳೆಸಲು ತಮ್ಮ ಮಗುವಿನೊಂದಿಗೆ ಟೆಲ್‍ಅವಿವ್ ವಿಮಾನ ನಿಲ್ದಾಣಕ್ಕೆ ಬಂದರು. ಆದರೆ, ಮಗುವಿಗೆ ಟಿಕೆಟ್ ತೆಗೆದುಕೊಂಡಿರಲಿಲ್ಲ. ವಿಮಾನ ನಿಲ್ದಾಣದ ಸಿಬ್ಬಂದಿಗಳು ಮಗುವಿಗೆ ಟಿಕೆಟ್ ಕಡ್ಡಾಯ ಎಂದಾಗ ವಿಲಕ್ಷಣ ಮನೋಭಾವದ ದಂಪತಿ ಇನ್ನೊಂದು ಟಿಕೆಟ್ ಖರೀದಿಸುವ ಬದಲು ಮಗುವನ್ನು ಚೆಕ್ ಇನ್ ಕೌಂಟರ್‍ನಲ್ಲೇ ಬಿಟ್ಟು ವಿಮಾನ ಹತ್ತಲು […]