ಕರ್ನಾಟಕ-ಆಂಧ್ರಪ್ರದೇಶ ರಾಜ್ಯಗಳ ನಡುವೆ ಅಂತರರಾಜ್ಯ ಸಾರಿಗೆ ಒಪ್ಪಂದ

ಬೆಂಗಳೂರು, ಫೆ.3-ಕರ್ನಾಟಕ ಹಾಗೂ ಆಂಧ್ರ ಪ್ರದೇಶ ರಾಜ್ಯಗಳ ನಡುವೆ ಇದುವರೆಗೆ ಒಂದು ಪ್ರಧಾನ ಅಂತರರಾಜ್ಯ ಸಾರಿಗೆ ಒಪ್ಪಂದ ಹಾಗೂ 8 ಪೂರಕ ಅಂತರರಾಜ್ಯ ಸಾರಿಗೆ ಒಪ್ಪಂದಗಳಾಗಿವೆ. ಕರ್ನಾಟಕ ಹಾಗೂ ಆಂಧ್ರ ಪ್ರದೇಶ ರಾಜ್ಯಗಳ ನಡುವಿನ ಈ ಹಿಂದಿನ ಅಂತರರಾಜ್ಯ ಸಾರಿಗೆ ಒಪ್ಪಂದವನ್ನು 2008ರಲ್ಲಿ ಮಾಡಿಕೊಳ್ಳಲಾಗಿತ್ತು. ಎರಡೂ ರಾಜ್ಯಗಳ ನಡುವೆ ಪ್ರಯಾಣಿಸುವ ಸಾರ್ವಜನಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಮತ್ತಷ್ಟು ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸಲು ನಿನ್ನೆ ವಿಜಯವಾಡದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ […]

ಭಾರತಕ್ಕೆ ಮತ್ತೆ ಸೌತ್ ಆಫ್ರಿಕಾದ 100 ಚೀತಾಗಳು

ಜೋಹಾನ್ಸ್‍ಬರ್ಗ್, ಜ.27- ನಮೀಬಿಯಾದಿಂದ ಎಂಟು ಚೀತಾಗಳು ಭಾರತದ ಕಾಡಿಗೆ ಬಂದ ಕೆಲ ತಿಂಗಳ ಬೆನ್ನಲ್ಲೇ ಇನ್ನೂ ನೂರು ಚಿರತೆಗಳನ್ನು ಭಾರತಕ್ಕೆ ಕಳುಹಿಸಲು ದಕ್ಷಿಣ ಆಫ್ರಿಕಾ ಒಪ್ಪಂದ ಮಾಡಿಕೊಂಡಿದೆ.ಅದರ ಪ್ರಕಾರ, ಮುಂದಿನ ತಿಂಗಳು 12 ಚೀತಾಗಳನ್ನು ಭಾರತಕ್ಕೆ ಕಳುಹಿಸಿಕೊಡಲಾಗುವುದು ಎಂದು ಸೌತ್ ಆಫ್ರಿಕಾದ ಪರಿಸರ ಮಂತ್ರಾಲಯ ಹೇಳಿದೆ. ಒಟ್ಟು ನೂರು ಚೀತಾಗಳನ್ನು ಸೌತ್ ಆಫ್ರಿಕಾದಿಂದ ಭಾರತಕ್ಕೆ ಏಳೆಂಟು ಹಂತಗಳಲ್ಲಿ ಕರೆತರಲು ಯೋಜನೆ ರೂಪಿಸಲಾಗಿದೆ. ಚೀತಾಗಳು ಹೊಂದಿಕೊಳ್ಳುವ ಪರಿಸರವನ್ನು ಸೃಷ್ಟಿಸಬೇಕಾಗಿದ್ದರಿಂದ ಹಂತ ಹಂತವಾಗಿ ಭಾರತಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಚಿರತೆ […]