ಮೊರ್ಬಿ ದುರಂತ : ಪ್ರಮುಖ ಕಾರ್ಯಕ್ರಮ ರದ್ದುಗೊಳಿಸಿದ ಪ್ರಧಾನಿ ಮೋದಿ

ಅಹಮದಾಬಾದ್,ಅ.31- ಮೊರ್ಬಿ ದುರಂತದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ನಡೆಯಬೇಕಿದ್ದ ಪ್ರಮುಖ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಇಂದು ರದ್ದುಗೊಳಿಸಿದ್ದಾರೆ. ನವೀಕರಣಗೊಂಡು ಕಳೆದ ವಾರವಷ್ಟೇ ಪುನರಾರಂಭಗೊಂಡಿದ್ದ ಸೇತುವೆ ನಿನ್ನೆ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದು, ಇಲ್ಲಿಯವರೆಗೆ ಕನಿಷ್ಠ 132 ಸಾವುಗಳಾಗಿರುವ ಬಗ್ಗೆ ವರದಿಯಾಗಿವೆ. ವಡೋದರಾದಲ್ಲಿ ಟಾಟಾ-ಏರ್‍ಬಸ್ ವಿಮಾನ ತಯಾರಿಕಾ ಘಟಕದ ಶಂಕುಸ್ಥಾಪನೆಗಾಗಿ ಪ್ರಧಾನಿ ಮೋದಿ ಹಿಂದಿನ ದಿನವೇ ತಮ್ಮ ತವರು ರಾಜ್ಯಕ್ಕೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತ್‍ನ ಕೆವಾಡಿಯಾದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ […]