AC ಸ್ಫೋಟ : ತಾಯಿ, ಮಕ್ಕಳು ಸಜೀವ ದಹನ

ರಾಯಚೂರು,ಮಾ.7- ಮನೆಯ ಬೆಡ್‍ರೂಮ್‍ನಲ್ಲಿ ಅಳವಡಿಸಿದ್ದ ಏಸಿ(ಹವಾನಿಯಂತ್ರಕ)ಸ್ಪೋಟಗೊಂಡು ಹೊತ್ತಿಕೊಂಡ ಬೆಂಕಿಯಿಂದ ತಾಯಿ ಇಬ್ಬರು ಮಕ್ಕಳು ಸಜೀವವಾಗಿ ದಹನಗೊಂಡಿರುವ ಘಟನೆ ಶಕ್ತಿನಗರದಲ್ಲಿ ನಡೆದಿದೆ. ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಇಂಜಿನಿಯರ್ ಆಗಿರುವ ಸಿದ್ದಲಿಂಗಯ್ಯ ಅವರ ಪತ್ನಿ ರಂಜಿತಾ(33), ಪುತ್ರಿಯರಾದ ಮೃದುಲ(13) ಹಾಗೂ ತಾರುಣ್ಯ(5) ಮೃತ ದುರ್ದೈವಿಗಳು. ಕಳೆದ ರಾತ್ರಿ ಮಲಗುವಾಗ ಏಸಿ ಆನ್ ಮಾಡಿದ್ದರು. ಸ್ವಲ್ಪ ಸಮಯದಲ್ಲಿ ಅದು ಸ್ಪೋಟಗೊಂಡು ಬೆಂಕಿ ಕಿಡಿ ಬಟ್ಟೆಗೆ ಮೇಲೆ ಬಿದ್ದಿದೆ. ಕ್ಷಣಮಾತ್ರದಲ್ಲಿ ಬೆಂಕಿ ಇಡೀ ಕೋಣೆ ಆವರಿಸಿ ಎಲ್ಲರೂ ಹೊರಬರಲಾಗದೆ. ಸಜೀವವಾಗಿ ದಹನಗೊಂಡಿದ್ದಾರೆ […]