ಏರ್ ಇಂಡಿಯಾ ಸಂಸ್ಥೆ ಟಾಟಾಗ್ರೂಪ್‍ಗೆ ಹಸ್ತಾಂತರ

ನವದೆಹಲಿ, ಜ.27- ಕೇಂದ್ರ ಸರ್ಕಾರ ಏರ್ ಇಂಡಿಯಾವನ್ನು ಟಾಟಾಗ್ರೂಪ್‍ಗೆ ಇಂದು ಹಸ್ತಾಂತರಿಸಲಿದೆ. ಸುಮಾರು 69 ವರ್ಷಗಳ ಹಿಂದೆ ಭಾರತ ಸರ್ಕಾರ ವಿಮಾನಯಾನವನ್ನು ಟಾಟಾಗ್ರೂಪ್ ಸಮೂಹದಿಂದ ತನ್ನ ಅಧೀನಕ್ಕೆ ತೆಗೆದುಕೊಂಡಿತ್ತು. ಇದೀಗ ಮತ್ತೆ ಏರ್ ಇಂಡಿಯಾವನ್ನು ಟಾಟಾ ಸಮೂಹಕ್ಕೆ ಹಸ್ತಾಂತರಿಸಲಾಗುತ್ತಿದೆ. ಕಳೆದ ವರ್ಷ ಅ.8ರಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಏರ್ ಇಂಡಿಯಾ ಟೇಲ್ಸ್ ಪ್ರೈ.ಲಿ.ಗೆ 18 ಸಾವಿರ ಕೋಟಿ ರೂ.ಗೆ ಕೇಂದ್ರ ಸರ್ಕಾರ ಮಾರಾಟ ಮಾಡಿತ್ತು. ಇದು ಟಾಟಾಗ್ರೂಪ್‍ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಹಸ್ತಾಂತರ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, […]