ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕಷ್ಟವಾಗಬಹುದು ಉಸಿರಾಟ

ಬೆಂಗಳೂರು,ಡಿ.6- ಸಿಲಿಕಾನ್ ಸಿಟಿ ಬೆಂಗಳೂರು ಇದೀಗ ಪಲ್ಯೂಷನ್ ಸಿಟಿಯಾಗಿ ಬದಲಾಗಿದೆ. ನಗರದಲ್ಲಿ ವಾಯು ಮಾಲಿನ್ಯ ಮಟ್ಟ ತೀವ್ರವಾಗಿ ಕುಸಿದಿರುವುದರಿಂದ ಇಲ್ಲಿ ಇನ್ಮುಂದೆ ಉಸಿರಾಡುವುದೂ ಕಷ್ಟ ಕಷ್ಟ ಎನ್ನುವಂತಾಗಿದೆ. ರಾಷ್ಟ್ರ ರಾಜಧಾನಿ ದೆಹಲಿ ಮಾದರಿಯಲ್ಲೇ ಬೆಂಗಳೂರಲ್ಲೂ ವಾಯು ಮಾಲಿನ್ಯ ಏರಿಕೆಯಾಗುತ್ತಿ ರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಒಂದು ವರ್ಷದಲ್ಲಿ ನಗರದಲ್ಲಿ ಶೇ.40 ರಷ್ಟು ಮಾಲಿನ್ಯ ಹೆಚ್ಚಳವಾಗಿರುವು ಕಂಡು ಬಂದಿದೆ. ಕಳೆದ ವರ್ಷ ಇದ್ದ 66ರಷ್ಟಿದ್ದ ಎಕ್ಯೂಐ ವಾಯು ಗುಣಮಟ್ಟ ನವೆಂಬರ್ ಅಂತ್ಯದ ವೇಳೆಗೆ 93ಕ್ಕೆ ಏರಿಕೆಯಾಗಿರುವುದು ಕಂಡು ಬಂದಿರುವುದರಿಂದ […]

ಬೆಂಗಳೂರಿನಲ್ಲಿ ವಿಷವಾಗುತ್ತಿದೆ ಗಾಳಿ, ತಜ್ಞರ ಎಚ್ಚರಿಕೆ

ಬೆಂಗಳೂರು,ಅ.27- ಹಾನಿಕಾರಕ ಪಟಾಕಿಗಳಿಗೆ ನಿಷೇಧವಿದ್ದರೂ ಜನ ಮಾತ್ರ ಪಟಾಕಿ ಸಿಡಿಸುವುದನ್ನು ಬಿಡದಿರುವ ಹಿನ್ನಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ವಿಷದ ಗಾಳಿಗೆ ತುತ್ತಾಗುತ್ತಿದ್ಯಾ ಎಂಬ ಅನುಮಾನ ಕಾಡತೊಡಗಿದೆ.ನಿಷೇಧದ ನಡುವೆಯೂ ಪಟಾಕಿ ಸ್ಪೋಟ ಹೆಚ್ಚುತ್ತಿರುವುದರಿಂದ ನಗರದ ವಾಯು ಮಾಲಿನ್ಯ ಕಲುಷಿತಗೊಂಡಿರುವುದು ಅಂಕಿ ಅಂಶಗಳಲ್ಲಿ ಬಹಿರಂಗಗೊಂಡಿದೆ. ಇದೇ ರೀತಿ ವಾಯು ಮಾಲಿನ್ಯಕ್ಕೆ ಎಡೆ ಮಾಡಿಕೊಟ್ಟರೆ ನಗರದ ಗಾಳಿ ವಿಷವಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾವಿರಾರು ಮಂದಿ ಪಟಾಕಿ ಸಿಡಿಸಿದ್ದರಿಂದ ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಳಗೊಂಡಿರುವುದು […]

ದೀಪಾವಳಿ ಮುನ್ನವೇ ದೆಹಲಿ ಗಾಳಿ ಮತ್ತಷ್ಟು ಮಲೀನ

ನವದೆಹಲಿ,ಅ.22- ದೀಪಾವಳಿ ಹಬ್ಬ ಆರಂಭಕ್ಕೂ ಮುನ್ನವೇ ರಾಷ್ಟ್ರ ರಾಜಧಾನಿ ದೆಹಲಿ ಮಲಿನ ದುಪ್ಪಟ್ಟಾಗಿದೆ.ಹಬ್ಬ ಆರಂಭಕ್ಕೂ ಮುನ್ನವೆ ಈ ರೀತಿಯಾದರೆ, ಹಬ್ಬದ ನಂತರ ದೆಹಲಿ ಪರಿಸ್ಥಿತಿ ಹೇಗಿರಲಿದೆ ಎಂಬ ಚಿಂತೆ ಪರಿಸರ ಪ್ರೇಮಿಗಳನ್ನು ಕಾಡತೊಡಗಿದೆ. ಈಗಾಗಲೇ ಕಲುಷಿತ ನಗರವೆಂಬ ಕುಖ್ಯಾತಿಗೆ ಒಳಗಾಗಿರುವ ದೆಹಲಿಯ ಗಾಳಿ ಗುಣಮಟ್ಟ ಕಳಪೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆದರೂ, ಗಾಳಿಯ ಗುಣಮಟ್ಟ ಕಾಪಾಡಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಯಾವುದೆ ಪ್ರಯೋಜನವಾಗುತ್ತಿಲ್ಲ. ದೆಹಲಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ತಡೆಯಲು ಏರ್ ಕ್ವಾಲಿಟಿ ಮ್ಯಾನೇಜ್‍ಮೆಂಟ್ ಆಯೋಗ […]