ಕರ್ನಾಟಕದ ಅಭಿವೃದ್ಧಿಯಗೆ ಡಬಲ್ ಇಂಜಿನ್ ಸರ್ಕಾರ ಅನಿವಾರ್ಯ: PM ಮೋದಿ

ಶಿವಮೊಗ್ಗ,ಫೆ.27- ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, ವಿಕಾಸದ ಅಭಿಯಾನವು ಇನ್ನಷ್ಟು ಮುಂದೆ ಸಾಗಬೇಕಾದರೆ ನಾವು ಜೊತೆಗೆ ಸಾಗಬೇಕಾಗಿದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕೆಂದು ರಾಜ್ಯದ ಜನತೆಗೆ ಕರೆ ಕೊಟ್ಟರು. ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಅಧಿಕಾರದಲ್ಲಿದ್ದರೆ ಆಗುವ ಅನುಕೂಲಗಳ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ ಅವರು, ಕರ್ನಾಟಕದ ಅಭಿವೃದ್ಧಿಯ ಪಥ ಸಾಗಬೇಕಾದರೆ ಬಿಜೆಪಿ ಅನಿವಾರ್ಯ ಎಂಬುದನ್ನು ಸೂಚ್ಯವಾಗಿ ಹೇಳಿದರು. […]

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜು

ಶಿವಮೊಗ್ಗ,ಫೆ.21-ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಫೆ.27 ರಂದು ಆಗಮಿಸುತ್ತಿದ್ದು ಇದಕ್ಕಾಗಿ ಜಿಲ್ಲಾಡಳಿತ ಮತ್ತು ಬಿಜೆಪಿ ಸಕಲ ತಯಾರಿ ನಡೆಸಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ. ಅಂದು ಬೆಳಗ್ಗೆ 11.15 ಕ್ಕೆ ಪ್ರಧಾನಿ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣದ ಹೊಸ ರನ್ ವೇಗೆ ವಿಮಾನದಲ್ಲಿ ಬಂದಿಳಿಯಲಿದ್ದಾರೆ.ನಂತರ ಮಧ್ಯಾಹ್ನ 1 ಗಂಟೆಗೆ ಬೆಳಗಾವಿಗೆ ತೆರಳಲಿದ್ದಾರೆ. ಈಗಾಗಲೇ ಡಿಜಿಸಿಎಯಿಂದ ವಿಮಾನ ನಿಲ್ದಾಣಕ್ಕೆ ಲೈಸೆನ್ಸï ಸಿಕ್ಕಿದೆ. ರಾಜ್ಯದಲ್ಲಿಯೇ ಮೊದಲ ಹಂತದಲ್ಲಿಯೇ ಲೈಸೆನ್ಸï ಸಿಕ್ಕ ಮೊದಲ […]

ಇಂಗ್ಲೆಂಡ್‍ಗೆ ಅಪಾಯಕಾರಿ ಯುರೇನಿಯಂ ರವಾನೆ:
ಆರೋಪ ತಳ್ಳಿ ಹಾಕಿದ ಪಾಕ್

ಇಸ್ಲಾಮಾಬಾದ್,ಜ.12- ಕಳೆದ ತಿಂಗಳು ಲಂಡನ್‍ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಯುರೇನಿಯಂ ಮಿಶ್ರಿತ ಸರಕುಗಳು ಕರಾಚಿಯಿಂದ ರವಾನೆಯಾಗಿವೆ ಎಂಬ ಬ್ರಿಟಿಷ್ ಮಾಧ್ಯಮಗಳ ವರದಿಗಳನ್ನು ಪಾಕಿಸ್ತಾನ ತಳ್ಳಿ ಹಾಕಿದೆ. ಕಳೆದ ತಿಂಗಳು ಹೀಥ್ರೂ ವಿಮಾನ ನಿಲ್ದಾಣದಲ್ಲಿ ಯುರೇನಿಯಂನಿಂದ ಕಲುಷಿತಗೊಂಡ ಸರಕುಗಳನ್ನು ಗಡಿ ಅಧಿಕಾರಿಗಳು ವಶಪಡಿಸಿಕೊಂಡರು. ನಂತರ ಬ್ರಿಟಿಷ್ ಭಯೋತ್ಪಾದನಾ ನಿಗ್ರಹ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದರು. ಬ್ರಿಟಿಷ್ ಮೂಲದ ಸನ್ ಪತ್ರಿಕೆ ಈ ಕುರಿತು ವರದಿ ಮಾಡಿದ್ದು,ಯುರೇನಿಯಂ ಪಾಕಿಸ್ತಾನದಿಂದ ಬಂದಿದೆ ಎಂದು ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಪಾಕಿಸ್ತಾನದ ಉನ್ನತ […]