ಉಗ್ರ ಸಂಘಟನೆಗಳ ಬಲವೃದ್ಧಿ ; ವಿಶ್ವಸಂಸ್ಥೆಯಲ್ಲಿ ಭಾರತದ ಕಳವಳ

ನ್ಯೂಯಾರ್ಕ್,ಜ.19- ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿಷೇಸಿರುವ ಲಷ್ಕರ್-ಎ-ತಯ್ಯಬಾ ಮತ್ತು ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗಳೊಂದಿಗೆ ಅಲ್-ಖೈದಾ ಸಂಪರ್ಕಗಳು ಬಲವಾಗಾ ಲಾರಂಭಿಸಿವೆ ಎಂದು ವಿಶ್ವಸಂಸ್ಥೆಗೆ ಭಾರತದ ಪ್ರತಿನಿ ತಿಳಿಸಿದ್ದಾರೆ. ಆಫ್ಘಾನಿಸ್ತಾನದ ಬೆಳವಣಿಗೆಗಳೊಂದೇ ಭಯೋತ್ಪಾದಕ ಸಂಘಟನೆಗಳ ಬಲವರ್ಧನೆಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ. ಇಸ್ಲಾಮಿಕ್ ಸ್ಟೇಟ್(ಐಸಿಸ್) ಸಂಘಟನೆ ತನ್ನ ಕಾರ್ಯ ವಿಧಾನವನ್ನು ಬದಲಿಸಿಕೊಂಡಿದೆ. ಸಿರಿಯಾ ಮತ್ತು ಇರಾಕ್‍ನಲ್ಲಿ ತನ್ನ ನೆಲೆಯನ್ನು ಪುನಃ ಗಳಿಸಿಕೊಳ್ಳಲು ಒತ್ತು ನೀಡಿದೆ ಮತ್ತು ಅದರ ಪ್ರಾದೇಶಿಕ ಸಹ ಸಂಘಟನೆಗಳು ಬಲರ್ವಸಿಕೊಳ್ಳುತ್ತಿದ್ದು, ತಮ್ಮ ನೆಲೆ ವಿಸ್ತರಿಸಿಕೊಳ್ಳುತ್ತಿವೆ. ವಿಶೇಷವಾಗಿ ಆಫ್ರಿಕಾ […]