ರಾಹುಲ್ ಬೆನ್ನಿಗೆ ನಿಂತು ಗಮನ ಸೆಳೆಯುತ್ತಿರುವ ಗಡ್ಡಧಾರಿ

ಬೆಂಗಳೂರು,ಅ.11- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಹಲವರ ಪರಿಶ್ರಮ ಎದ್ದು ಕಾಣುತ್ತಿದೆ. ಅದರಲ್ಲಿ ಪ್ರಮುಖವಾಗಿ ಗಮನಸೆಳೆಯುವುದು ಗಡ್ಡಧಾರಿ ವ್ಯಕ್ತಿ. ಪ್ರತಿ ಫ್ರೇಮ್ನಲ್ಲೂ ರಾಹುಲ್ ಗಾಂಧಿ ಅವರ ಹಿಂದೆಯೇ ಕಾಣಿಸಿಕೊಳ್ಳುವ ಈ ಗಡ್ಡಧಾರಿ ಹೆಸರು ಅಲಂಕಾರ್. ರಾಹುಲ್ ಗಾಂಧಿ ಅವರ ಕಾರು ಚಾಲನೆಯಿಂದ ಹಿಡಿದು ಅವರ ವೈಯಕ್ತಿಕ ಅಗತ್ಯಗಳಿಗೆ ಸ್ಪಂದಿಸುವುದರಲ್ಲಿ ಅಲಂಕಾರ್ ಮಹತ್ವದ ಪಾತ್ರ ವಹಿಸಿದ್ದಾರೆ. ಯಾತ್ರೆಯುದ್ದಕ್ಕೂ ಕಾಲಕಾಲಕ್ಕೆ ನೀರು, ಹಣ್ಣಿನ ರಸ ಸೇರಿದಂತೆ ಅಗತ್ಯಗಳನ್ನು ಪೂರೈಸುವುದು ಕಂಡುಬರುತ್ತಿದೆ. ಯಾವ ಕ್ಷಣದಲ್ಲೂ ಅಲಂಕಾರ್ ಯಾತ್ರೆಯಿಂದ ಪಕ್ಕಕ್ಕೆ […]