ಸಲಿಂಗ ವಿವಾಹ ಮಾನ್ಯತೆ ಬಯಸುವ ಅರ್ಜಿಗಳು ಸುಪ್ರೀಂ ಪೀಠಕ್ಕೆ ವರ್ಗಾವಣೆ

ನವದೆಹಲಿ,ಜ.6- ಸಲಿಂಗ ವಿವಾಹ ಮಾನ್ಯಕ್ಕಾಗಿ ದೇಶದ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಅರ್ಜಿಗಳನ್ನು ಸುಪ್ರೀಂಕೋರ್ಟ್ ತನ್ನ ಅಂಗಳಕ್ಕೆ ವರ್ಗಾವಣೆ ಮಾಡಿಕೊಂಡಿದ್ದು, ಮುಂದಿನ ವಿಚಾರಣೆಗೆ ಮಾರ್ಚ್ 13ಕ್ಕೆ ಸಮಯ ನಿಗದಿ ಮಾಡಿದೆ. ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಮತ್ತು ಜೆ.ಪಿ.ಪರ್ದಿವಾಲ ಅವರನ್ನೊಳಗೊಂಡ ವಿಭಾಗೀಯ ಪೀಠ, ಇಂದು ವಿಚಾರಣೆ ನಡೆಸಿ ಸಲಿಂಗ ವಿವಾಹಗಳ ಕುರಿತು ಫೆಬ್ರವರಿ 15ರೊಳಗೆ ಅಭಿಪ್ರಾಯ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಅದೇ ರೀತಿ ಎಲ್ಲಾ ಅರ್ಜಿದಾರರು ಇದೇ ಅವದಿಯ ಒಳಗೆ ಪ್ರಮಾಣ ಪತ್ರ ಸಲ್ಲಿಸುವಂತೆಯೂ […]