ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಅರೆಸ್ಟ್ ವಾರಂಟ್ ಜಾರಿ

ಹೇಗ್,ಮಾ.18-ಉಕ್ರೇನಿಯನ್ ಮಕ್ಕಳನ್ನು ಕಾನೂನುಬಾಹಿರವಾಗಿ ಗಡಿಪಾರು ಮಾಡಿದ ಯುದ್ಧ ಅಪರಾಧದ ಆರೋಪದ ಮೇಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಬಂಧನ ವಾರಂಟ್ ಪ್ರಕಟಿಸಿದೆ. ಇದೇ ಆರೋಪದ ಮೇಲೆ ಮಕ್ಕಳ ಹಕ್ಕುಗಳ ರಷ್ಯಾದ ಅಧ್ಯಕ್ಷೀಯ ಕಮಿಷನರ್ ಮರಿಯಾ ಲ್ವೊವಾ-ಬೆಲೋವಾ ವಿರುದ್ಧವೂ ವಾರೆಂಟ್ ಹೊರಡಿಸಿರುವುದಾಗಿ ಹೇಗ್ ಮೂಲದ ಕೋರ್ಟ್ ಹೇಳಿದೆ. ಕೋರ್ಟ್ ಆದೇಶವನ್ನು ಉಕ್ರೇನ್ ಸ್ವಾಗತಿಸಿದೆ. ಇದೊಂದು ಐತಿಹಾಸಿಕ ನಿರ್ಧಾರ ಎಂದು ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಪ್ರಶಂಸಿದ್ದಾರೆ. ಚೀನಾದ ನಾಯಕ ಕ್ಸಿ ಜಿನ್‍ಪಿಂಗ್‍ನಿಂದ ಮಾಸ್ಕೋ […]

ಮುಂದುವರೆದ ಅದಾನಿ – ಹಿಡನ್‍ಬರ್ಗ್ ಜುಗಲ್ ಬಂದಿ

ನವದೆಹಲಿ,ಜ.30- ದೇಶದ ಶ್ರೀಮಂತ ಉದ್ಯಮ ಸಂಸ್ಥೆ ಅದಾನಿ ಗ್ರೂಪ್ ಮತ್ತು ಅಮೆರಿಕಾದ ಹಿಡನ್‍ಬರ್ಗ್ ನಡುವಿನ ಜುಗಲ್ ಬಂದಿ ಮುಂದುವರೆದಿದೆ. ಹಿಡನ್‍ಬರ್ಗ್ ವರದಿ ಸುಳ್ಳು ಮತ್ತು ಜನರನ್ನು ತಪ್ಪುದಾರಿಗೆ ಎಳೆಯುವ ಯತ್ನ ಎಂದು ಅದಾನಿ ಸಂಸ್ಥೆ ದೂರಿದೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಹಿಡನ್‍ಬರ್ಗ್ ಸಂಸ್ಥೆ ನಾವು ಎತ್ತಿರುವ ಪ್ರಶ್ನೆಗಳನ್ನು ಉಪೇಕ್ಷಿಸುವುದರಿಂದ ರಾಷ್ಟ್ರೀಯ ವಂಚನೆಯನ್ನು ಮರೆ ಮಾಚಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದೆ. ಅದಾನಿ ಗ್ರೂಪ್‍ನ ಮುಖ್ಯ ಹಣಕಾಸು ಅಧಿಕಾರಿ ಜುಗೇಶಿಂದರ್ ಸಿಂಗ್, ಬಿಸಿನೆಸ್ ಟುಡೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ, […]

ನನ್ನನ್ನು ಯಾರು ಏನು ಮಾಡೊಕ್ಕಾಗಲ್ಲ : ತೊಡೆತಟ್ಟಿದ ಸಿದ್ದರಾಮಯ್ಯ

ಹೊಳೆನರಸೀಪುರ,ಜ.14- ಕೆಲವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಆದರೂ ನನ್ನನ್ನು ಯಾರು ಏನು ಮಾಡಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತೊಡೆ ತಟ್ಟಿದ್ದಾರೆ. ತಾಲೂಕಿನ ಶ್ರವಣೂರಿನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ನ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಬಿಜೆಪಿಯವರಿಗೆ ನನ್ನನ್ನು ಕಂಡರೆ ಭಯ. ಹೀಗಾಗಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಮದ್ಯ ಖರೀದಿ ವಯೋಮಿತಿ 21ರಿಂದ 18ಕ್ಕಿಳಿಸಲು ಮುಂದಾದ ಸರ್ಕಾರ ನನ್ನ ವಿರುದ್ಧ ಕೆಲವರಿಂದ ಪುಸ್ತಕ ಬರೆಸಲು ಮುಂದಾಗಿದ್ದಾರೆ. ಅವರು ನನ್ನ ವಿರುದ್ಧ […]

ಸಾಲು ಸಾಲು ಆರೋಪಗಳಿಂದ ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ ಸರ್ಕಾರ

ಬೆಂಗಳೂರು,ಜ.9- ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಆಡಳಿತಾರೂಢ ಬಿಜೆಪಿ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳು ಸರ್ಕಾರ ಮತ್ತು ಪಕ್ಷದಲ್ಲಿ ಮುಜುಗರ ಸೃಷ್ಟಿಸಿದೆ. ಒಂದು ಕಡೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಕೇಂದ್ರದ ಘಟಾನುಘಟಿ ನಾಯಕರು ರಾಜ್ಯಕ್ಕೆ ದಾಂಗುಡಿ ಇಡುತ್ತಿರುವಾಗಲೇ ಸಚಿವರು ಮತ್ತು ಶಾಸಕರ ಮೇಲೆ ಕೇಳಿಬರುತ್ತಿರುವ ಆರೋಪಗಳು ಕಮಲ ಪಡೆಯನ್ನು ತಬ್ಬಿಬ್ಬುಗೊಳಿಸುತ್ತಿದೆ. ರೌಡಿಶೀಟರ್ ಹಿನ್ನೆಲೆಯ ಸ್ಯಾಂಟ್ರೋ ರವಿ ಜತೆ ಕೆಲವು ಪ್ರಭಾವಿ ಸಚಿವರು ಕಾಣಿಸಿಕೊಂಡಿರುವುದು, ವಿಧಾನಸೌಧದ ಗೇಟ್ ಬಳಿ ಲೋಕೋಪಯೋಗಿ ಇಲಾಖೆಯ ಇಂಜನಿಯರ್ ಬಳಿ ಸಿಕ್ಕಿಬಿದ್ದ 10 […]

ಬೊಮ್ಮಾಯಿ ಸರ್ಕಾರದ ಮೇಲೆ ಮತ್ತೊಂದು ಬಾಂಬ್ ಸಿಡಿಸಿದ ಸಿದ್ದರಾಮಯ್ಯ..!

ಬೆಂಗಳೂರು,ಡಿ.17- ಉನ್ನತ ಶಿಕ್ಷಣದ ಗುಣಮಟ್ಟವ ನ್ನು ಹಾಳುಗೆಡವಿರುವ ಬಿಜೆಪಿ ಸರ್ಕಾರ, ಒಂದು ವರ್ಷದಲ್ಲಿ ಎರಡು ಬಾರಿ ಸಹಾಯಕ ಪ್ರಾಧ್ಯಾಪಕರುಗಳ, ಉಪನ್ಯಾಸಕರ ವರ್ಗಾವಣೆಗೆ ಮುಂದಾಗಿರುವುದು ಅನುಮಾನ ಮೂಡಿಸಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಸಹಾಯಕ ಪ್ರಾಧ್ಯಾಪಕರುಗಳ ವರ್ಗಾವಣೆಯನ್ನು ಮಧ್ಯಂತರ ಅವಧಿಯ ಡಿಸೆಂಬರ್ ಮಾಹೆಯಲ್ಲಿ ನಡೆಸಲು ಆಯುಕ್ತಾಲಯ ಪ್ರಕಟಣೆಯನ್ನು ಹೊರಡಿಸಿದೆ. ಸರ್ಕಾರವು ವರ್ಗಾವಣೆಗಳಿಗೆ ತೋರಿಸುತ್ತಿರುವ ಆಸಕ್ತಿ, ಅಭಿವೃದ್ಧಿ ವಿಷಯಗಳಿಗೆ ಹಾಗೂ ನೇಮಕಾತಿಗಳಿಗೆ ತೋರಿಸುತ್ತಿಲ್ಲ. ಕಾಲೇಜು […]

ಮತದಾರರ ಮಾಹಿತಿ ಕಳವು ಪ್ರಕರಣ : ಪಕ್ಷಗಳ ಕೆಸರೆರಚಾಟ ಮುಂದುವರಿಕೆ

ಬೆಂಗಳೂರು,ನ.18- ರಾಜ್ಯ ರಾಜಕಾರಣದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿರುವ ಮತದಾರರ ಪರಿಷ್ಕøತ ಪಟ್ಟಿಯಲ್ಲಿನ ಮಾಹಿತಿ ಕಳವು ಪ್ರಕರಣ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಕೆಸರೆರಚಾಟ ಶುಕ್ರವಾರವೂ ಮುಂದುವರೆದಿದೆ.ಸರ್ಕಾರ ಇದರಲ್ಲಿ ಯಾವುದೇ ರೀತಿಯ ಆರೋಪ, ಅಕ್ರಮ ನಡೆದಿಲ್ಲ ಎಂದು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದರೆ ಪ್ರತಿಪಕ್ಷಗಳು ಮಾತ್ರ ತನಿಖೆ ನಡೆಯಲಿ ಎಂದು ಒತ್ತಾಯಿಸಿವೆ. ಇದರ ನಡುವೆ ರಾಜ್ಯ ಚುನಾವಣಾ ಆಯೋಗವು ಪ್ರಕರಣ ಕುರಿತಂತೆ ತನಿಖೆ ನಡೆಸಿ ವರದಿ ನೀಡುವಂತೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲಾ ಬಿಸ್ವಾಸ್ ಅವರನ್ನು ತನಿಖಾಕಾಧಿರಿಯನ್ನಾಗಿ ನೇಮಿಸಿದೆ.ಇನ್ನೊಂದೆಡೆ ಬೆಂಗಳೂರು […]