ಚಂದ್ರಶೇಖರ್ ಸಾವಿನ ಪ್ರಕರಣ, ವಿವಿಧ ಆಯಾಮಗಳಲ್ಲಿ ತನಿಖೆ

ಬೆಂಗಳೂರು,ನ,4- ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ (24) ಅವರ ಸಾವಿನ ಬಗ್ಗೆ ವಿವಿಧ ದೃಷ್ಠಿಕೋನದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಕುಮಾರ್ ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡುತ್ತಿದ್ದ ಅವರು ಚಂದ್ರಶೇಖರ್ ಅವರು ಕಾಣೆಯಾದ ದಿನದಿಂದ ನಾವು ತನಿಖೆ ನಡೆಸುತ್ತಿದ್ದು, ಈಗ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದೇವೆ ಎಂದು ವಿವರಿಸಿದರು. ಸ್ಥಳದಲ್ಲಿ ದಾವಣಗೆರೆ ವಲಯದ ಐಜಿಪಿ, ಎಸ್ಪಿ ಇನ್ನಿತರ ಅಧಿಕಾರಿಗಳು ಹೊನ್ನಾಳಿಯಲ್ಲೇ ಮೊಖಂ ಹೂಡಿದ್ದಾರೆ. ನಾನೂ […]