ಅರಮನೆಯಲ್ಲಿ ಖಾಸಗಿ ದರ್ಬಾರ್‌ಗೆ ಸಿದ್ಧತೆ, ಸಾರ್ವಜನಿಕರ ಪ್ರವೇಶ ನಿರ್ಬಂಧ

ಮೈಸೂರು, ಸೆ.20- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಮೈಸೂರು ಅರಮನೆಯಲ್ಲಿಂದು ಸಿಂಹಾಸನ ಜೋಡಣೆ ಆರಂಭಿಸಲಾಗಿದೆ. ಈ ಕಾರಣದಿಂದ ಅರಮನೆಗೆ ಈ ದಿನ ಮಧ್ಯಾಹ್ನದ ತನಕ ಸಾರ್ವಜನಿಕರ ಪ್ರವೇಶ ನಿರ್ಬಂಧ ಗೊಳಿಸಲಾಗಿದೆ. ಸಿಂಹಾಸನ ಜೋಡಣೆ ಮಾಡುತ್ತಿರುವ ಕಾರಣ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಅರಮನೆಯ ಗೇಟ್‍ಗಳನ್ನು ಬಂದ್ ಮಾಡಲಾಗಿದೆ. ಗೆಜ್ಜಗಳ್ಳಿ ಗ್ರಾಮದ ನುರಿತವರು ಐತಿಹ್ಯ ಸಿಂಹಾಸನ ಜೋಡಣೆ ಕಾರ್ಯದಲ್ಲಿ ತೊಡಗಿದ್ದಾರೆ. ರತ್ನಖಚಿತ ಸಿಂಹಾಸನ ಜೋಡಣಾ ಕಾರ್ಯ ಈಗ ಆರಂಭವಾಗಿದೆ. ಇದನ್ನೂ ಓದಿ : […]