ಅಂಬಾರಿ ಉತ್ಸವ ಸ್ಲೀಪರ್ ಬಸ್‍ಗಳಿಗೆ ಚಾಲನೆ

ಬೆಂಗಳೂರು,ಫೆ.21-ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಂಬಾರಿ ಉತ್ಸವ ಸ್ಲೀಪರ್ ಬಸ್‍ಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ವಿಧಾನಸೌಧದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಅಂಬಾರಿ ಉತ್ಸವದ ಬಸ್‍ಗಳಿಗೆ ಮುಖ್ಯಮಂತ್ರಿ ಹಸಿರುನಿಶಾನೆ ತೋರಿದರು. ಕೆಎಸ್‍ಆರ್‍ಟಿಸಿಯು 50 ಓಲ್ವೊ ಸ್ಲೀಪರ್ ವಾಹನಗಳನ್ನು ಅಂಬಾರಿ ಉತ್ಸವದ ಬಸ್‍ಗಳನ್ನಾಗಿ ಕಾರ್ಯಾಚರಣೆ ನಡೆಸಲಿದ್ದು, ಮೊದಲ ಹಂತವಾಗಿ ಇಂದು 15 ಅಂಬಾರಿ ಉತ್ಸವದ ಬಸ್‍ಗಳಿಗೆ ಚಾಲನೆ ನೀಡಲಾಯಿತು. ಅಂಬಾರಿ ಉತ್ಸವ ಎಂಬ ಬ್ರಾಂಡ್ ಹೆಸರು ಹೊಂದಿರುವ ಹಾಗೂ ಸಂಭ್ರಮದ ಪ್ರಯಾಣ ಎಂಬ ಟ್ಯಾಗ್‍ಲೈನ್ ಹೊಂದಿರುವ […]