ಉನ್ನತ ಶಿಕ್ಷಣದಲ್ಲಿ ಭಾರತ ವಿಶ್ವಪ್ರಸಿದ್ಧವಾಗಿದೆ; ಅಲ್ಬನಿಸ್

ನವದೆಹಲಿ,ಮಾ.11-ಉನ್ನತ ಶಿಕ್ಷಣದಲ್ಲಿ ಭಾರತ ವಿಶ್ವ ಪ್ರಸಿದ್ಧ ಸ್ಥಳವಾಗಿದೆ ಅಂತಹ ಸ್ಥಳಕ್ಕೆ ಬಂದಿರುವುದು ನನಗೆ ಖುಷಿ ತರಿಸಿದೆ ಎಂದು ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ತಿಳಿಸಿದ್ದಾರೆ. ದೆಹಲಿ ಐಐಟಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಉನ್ನತ ಶಿಕ್ಷಣದ ಅತ್ಯಂತ ಪ್ರತಿಷ್ಠಿತ ಕೇಂದ್ರ ಮಾತ್ರವಾಗಿರದೆ, ವಿಶ್ವಪ್ರಸಿದ್ಧ ಸ್ಥಳವಾಗಿದೆ ಮತ್ತು ಇಲ್ಲಿಗೆ ಬಂದಿರುವುದು ತುಂಬಾ ಗೌರವವಾಗಿದೆ ಎಂದಿದ್ದಾರೆ. ನವದೆಹಲಿಯ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಭೇಟಿಯಾಗುವುದು […]