ಕನ್ನಡಿಗ ಕೆ.ಎಲ್.ರಾಹುಲ್ ನೆರವಿಗೆ ಬಂದ ಗಂಭೀರ್

ನವದೆಹಲಿ,ಫೆ.25-ಕಳಪೆ ಫಾರ್ಮ್‍ನಿಂದಾಗಿ ಭಾರಿ ಟೀಕೆಗೆ ಗುರಿಯಾಗಿರುವ ಖ್ಯಾತ ಕ್ರಿಕೆಟ್ ಪಟು ಅಪ್ಪಟ ಕನ್ನಡಿಗ ಕೆ.ಎಲ್.ರಾಹುಲ್ ನೆರವಿಗೆ ಗೌತಮ್ ಗಂಭೀರ್ ಬಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದ ರಾಹುಲ್ ವಿರುದ್ಧ ಕನ್ನಡಿಗರೆ ಆಗಿರುವ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಸೇರಿದಂತೆ ಕೆಲವರು ಭಾರಿ ಟೀಕೆ ಮಾಡುತ್ತಿದ್ದಾರೆ. ರಾಹುಲ್ ಬದಲಿಗೆ ಇತ್ತಿಚೆಗೆ ಉತ್ತಮ ಆಟ ಪ್ರದರ್ಶಿಸುತ್ತಿರುವ ಶುಭಮನ್ ಗಿಲ್‍ಗೆ ಅವಕಾಶ ಮಾಡಿಕೊಡಬೇಕು ಎಂಬ ಕೂಗುಗಳು ಕೇಳಿ ಬರುತ್ತಿರುವ ಸಂದರ್ಭದಲ್ಲೇ ಮಾಜಿ ಕ್ರಿಕೆಟಿಗರಾಗಿ ಇದೀಗ […]

ಬಿಜೆಪಿಗರಿಗೆ ಶಶಿ ತರೂರು ತಿರುಗೇಟು

ನವದೆಹಲಿ,ಫೆ.6- ಮುಷರಫ್ ಅವರನ್ನು ಹೊಗಳಿದ್ದಕ್ಕೆ ತಮ್ಮ ವಿರುದ್ಧ ತಿರುಗಿಬಿದ್ದಿದ್ದ ಬಿಜೆಪಿ ಮುಖಂಡರಿಗೆ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ತಕ್ಕ ತಿರುಗೇಟು ನೀಡಿದ್ದಾರೆ. ಹಿಂದಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಮುಷರಫ್ ಅವರೊಂದಿಗೆ ಕದನ ವಿರಾಮ ಏಕೆ ಘೋಷಿಸಿಕೊಂಡಿದ್ದರು ಎಂದು ಪ್ರಶ್ನಿಸಿರುವ ಶಶಿ ತರೂರ್ ಅವರು 2004 ರ ವಾಜಪೇಯಿ-ಮುಷರಫ್ ಜಂಟಿ ಹೇಳಿಕೆಗೆ ಸಹಿ ಹಾಕಬೇಕಿತ್ತು ಎಂದು ಟ್ವಿಟ್ ಮಾಡಿ ತಿರುಗೇಟು ನೀಡಿದ್ದಾರೆ. ಯಾರೇ ಆಗಿರಲಿ ಅವರ ಮರಣ ನಂತರ ಅವರನ್ನು ಟೀಕಿಸುವ ಬದಲು […]

ಅದಾನಿ ಕಂಪೆನಿಯಲ್ಲಿ ಸರ್ಕಾರಿ ಸಂಸ್ಥೆಗಳ ಹೂಡಿಕೆ ಚರ್ಚೆಗೆ ಪ್ರತಿಪಕ್ಷಗಳು ಪಟ್ಟು

ನವದೆಹಲಿ,ಫೆ.3- ಉದ್ಯಮಿ ಗೌತಮ್ ಅದಾನಿ ಕಂಪೆನಿಯಲ್ಲಿ ಸರ್ಕಾರಿ ಸೌಮ್ಯದ ಸಂಸ್ಥೆಗಳ ಬಂಡವಾಳ ಹೂಡಿಕೆಯಿಂದಾಗಿರುವ ನಷ್ಟಗಳ ಕುರಿತು ಚರ್ಚೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿರುವುದರಿಂದ, ಸಂಸತ್‍ನ ಎರಡನೇ ದಿನದ ಕಲಾಪವೂ ವ್ಯರ್ಥವಾಗಿದೆ. ರಾಜ್ಯಸಭೆ ಮತ್ತು ಲೋಕಸಭೆ ಉಭಯ ಸದನಗಳು ಭೋಜನ ವಿರಾಮದವರೆಗೂ ಮುಂದೂಡಿಕೆಯಾಗಿವೆ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ನೇತೃತ್ವದಲ್ಲಿ ಎಲ್ಲಾ ವಿರೋಧ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿದ್ದು, ಸರ್ಕಾರದ ವಿರುದ್ಧದ ಹೋರಾಟಕ್ಕೆ ಪಣತೊಟ್ಟಿವೆ. ನಿನ್ನೆ ರಾಜ್ಯಸಭೆ ಮತ್ತು ಲೋಕಸಭೆಯ ಕಲಾಪದಲ್ಲೂ ಯಾವುದೇ ಚರ್ಚೆ ನಡೆಯದೆ ಸಮಯ ವ್ಯರ್ಥವಾಗಿತ್ತು. ಬೆಳಗ್ಗೆ […]

ನಾನಾ ದೇಶಗಳಿಂದ ವಿದೇಶಿಗರ ದಾಂಗುಡಿ, ಬೆಂಗಳೂರಲ್ಲಿ ಹೆಚ್ಚಾಯ್ತು ಕೊರೊನಾ ಆತಂಕ

ಬೆಂಗಳೂರು,ಡಿ.28- ಹೊಸ ವರ್ಷಾಚರಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಸಿಲಿಕಾನ್ ಸಿಟಿಗೆ ಸಾವಿರಾರು ಪ್ರವಾಸಿಗರು ದಾಂಗುಡಿ ಇಡುತ್ತಿರುವುದರಿಂದ ನಗರದಲ್ಲಿ ಕೊರೊನಾ ಆತಂಕ ಶುರುವಾಗಿದೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಾಲು ಸಾಲು ರಜೆ ಸಿಕ್ಕಿರುವುದರಿಂದ ಸಾವಿರಾರು ಪ್ರವಾಸಿಗರು ನಗರಕ್ಕೆ ಆಗಮಿಸುತ್ತಿದ್ದು, ಬಹುತೇಕ ಹೋಟೆಲ್‍ಗಳು ಪ್ರವಾಸಿಗರಿಂದ ತುಂಬಿ ಹೋಗಿದೆ. ಅನಿವಾಸಿ ಭಾರತೀಯರು ಸೇರಿದಂತೆ ದೇಶ ವಿದೇಶಗಳಲ್ಲಿರುವ ಸಾವಿರಾರು ಮಂದಿ ರಾಜ್ಯಕ್ಕೆ ಆಗಮಿಸುತ್ತಿರುವುದರಿಂದ ಪಂಚತಾರಾ ಹೋಟೆಲ್ ಸೇರಿದಂತೆ ರಾಜ್ಯದ ಬಹುತೇಕ ಹೋಟೆಗಳಿಗೆ ಭರ್ಜರಿ ವ್ಯಾಪಾರವಾಗುತ್ತಿದೆ. ಹೋಟೆಲ್ ಬುಕ್ಕಿಂಗ್ ಜೋರಾಗಿ ನಡೆಯುತ್ತಿದ್ದು, ಹೊಸ ವರ್ಷದ ಆರಂಭದ […]

ಮಿತಿಮೀರಿದ ಕೋವಿಡ್ ಕೇಸ್, ಚೀನಾದಲ್ಲಿ ರಕ್ತಕ್ಕಾಗಿ ಹಾಹಾಕಾರ

ನವದೆಹಲಿ,ಡಿ.26- ಕೋವಿಡ್ ಸೋಂಕಿನ ಪ್ರಕರಣಗಳ ತೀವ್ರ ಹೆಚ್ಚಳದ ನಡುವೆ ಚೀನಾದಲ್ಲಿ ರಕ್ತದ ಕೊರತೆ ಎದುರಾಗಿರುವುದು ಮತ್ತಷ್ಟು ಆತಂಕಗಳನ್ನು ಸೃಷ್ಟಿಸಿದೆ. ವೈಯಕ್ತಿಕ ಸುರಕ್ಷತೆಯ ಖಾತ್ರಿಯೊಂದಿಗೆ ರಕ್ತ ದಾನ ಮಾಡಲು ಜನ ಮುಂದೆ ಬರಬೇಕು ಎಂದು ಚೀನಾ ಸರ್ಕಾರ ಮನವಿ ಮಾಡಿದೆ. ಕೋವಿಡ್ ಪ್ರಕರಣಗಳು ಹಾಗೂ ಶೀತವಾತಾವರಣದಿಂದ ರಕ್ತದ ಬೇಡಿಕೆ ಹೆಚ್ಚಾಗಿದೆ ಎಂದು ಸರಳವಾಗಿ ವಿಷಯ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆದಿದೆ. ಆದರೆ, ಇದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಕೋವಿಡ್ ರೂಪಾಂತರಿ ಯಾವ ರೀತಿಯಲ್ಲಿದೆ ಎಂದು ಅಂದಾಜಿಸಲು ಕಷ್ಟವಾಗುತ್ತಿದೆ. […]