ಅಮೃತಕಾಲ್ ಅಡಿ ಅಗತ್ಯ ನೀಲನಕ್ಷೆ ಸಿದ್ದಪಡಿಸಲು ಷಾ ಸಲಹೆ

ಗಾಜಿಯಾಬಾದ್,ಮಾ.6- ಮುಂದಿನ 25 ವರ್ಷಗಳ ಭವಿಷ್ಯಕ್ಕೆ ಸಜ್ಜುಗೊಳ್ಳಲು ಅಮೃತ್ಕಾಲ್ ಅಡಿ ಅಗತ್ಯ ನೀಲನಕ್ಷೆಯನ್ನು ಸಿದ್ದಪಡಿಸುವಂತೆ ಕೇಂದ್ರ ಗೃಹ ಅಮಿತ್ ಷಾ ಸಲಹೆ ಮಾಡಿದ್ದಾರೆ.ಕೇಂದ್ರೀಯ ಕೈಗಾರಿಕ ಭದ್ರತಾ ಪಡೆ (ಸಿಐಎಸ್ಎಫ್)ಯ 53ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ 2.5 ಟ್ರಿಲಿಯನ್ ಡಾಲರ್ ಆರ್ಥಿಕತೆಯಿಂದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ದಾಪುಗಾಲಿಡುತ್ತಿದೆ. ಈ ಹಂತದಲ್ಲಿ ಮತ್ತಷ್ಟು ಕೈಗಾರಿಕೆಗಳು, ಉತ್ಪದನಾ ವಲಯಗಳು ಆರಂಭಗೊಳ್ಳಲಿವೆ. ಅದಕ್ಕಾಗಿ ಸೂಕ್ತ ಭದ್ರತೆ ಒದಗಿಸಲು ನೀಲನಕ್ಷೆಯನ್ನು ತಯಾರು ಮಾಡಿ […]