ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಮುನ್ನಡೆಸುವತ್ತ ಜಿ-20 : ಅಮಿತಾಭ್ ಕಾಂತ್

ಬೆಂಗಳೂರು,ಮಾ.8- ಭಾರತವು ನಿರ್ಣಾಯಕ ಘಟ್ಟದಲ್ಲಿ ಮತ್ತು ಸೂಕ್ತ ಸಮಯದಲ್ಲಿ ʻಜಿ 20ʼ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ವಿಶ್ವದಾದ್ಯಂತದ ದೇಶಗಳು ಕಳೆದ ಮೂರು ವರ್ಷಗಳಲ್ಲಿ ಅನುಭವಿಸಿದ ಬಿಕ್ಕಟ್ಟುಗಳಿಂದ ʻಉತ್ತಮ ಪುನಶ್ಚೇತನʼಕ್ಕಾಗಿ ನೋಡುತ್ತಿವೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಹಿಡಿದು ಪ್ರಸ್ತುತ ಮುಂದುವರಿದಿರುವ ಹವಾಮಾನ ಬಿಕ್ಕಟ್ಟಿನವರೆಗೆ ಎಲ್ಲಾ ಬಿಕ್ಕಟ್ಟಿನ ಪರಿಣಾಮಗಳು ಯಾವಾಗಲೂ ಲಿಂಗಾಧಾರಿತವಾಗಿವೆ. ಅವುಗಳಿಗೆ ಮಹಿಳೆಯರು ಮತ್ತು ಹುಡುಗಿಯರು ಗರಿಷ್ಠ ಬೆಲೆ ತೆರುತ್ತಾರೆ, ಅವು ಅವರ ಸುರಕ್ಷತೆ, ಜೀವನೋಪಾಯ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಸರ್ವ ಸಮ್ಮತ ವಿಷಯವೇ […]