ಇಂದು ಅಮಿತ್ ಶಾ, ನಾಡಿದ್ದು ಮೋದಿ ರಾಜ್ಯಕ್ಕೆ ಭೇಟಿ

ಬೆಂಗಳೂರು, ಮಾ.23- ಶನಿವಾರ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಅದಕ್ಕೂ ಒಂದು ದಿನ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಇಂದು ರಾಜ್ಯಕ್ಕೆ ಬರುತ್ತಿದ್ದಾರೆ.ಯುಗಾದಿ ಹಬ್ಬ ಮುಗಿಯುತ್ತಿದ್ದಂತೆ ಬಿಜೆಪಿ ಹೈಕಮಾಂಡ್ ಜೋಡಿ ರಾಜ್ಯದಲ್ಲಿ ಕಮಾಲ್ ಮಾಡಲು ತಯಾರಾದಂತಿದೆ.ಇಂದು ರಾತ್ರಿ 8 ಗಂಟೆಗೆ ನವದೆಹಲಿ ವಿಮಾನ ನಿಲ್ದಾಣದಿಂದ ಪ್ರಯಾಣಿಸಲಿರುವ ಅಮಿತ್ ಶಾ, ರಾತ್ರಿ 10.40ಕ್ಕೆ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ರಾತ್ರಿ ರೇಸ್ ಕೋರ್ಸ್ ರಸ್ತೆಯಲ್ಲಿರುವ ಖಾಸಗಿ ತಾರಾ ಹೊಟೇಲ್‍ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. […]

ಅಮಿತ್ ಶಾ ಭೇಟಿಯಾದ ರಾಮ್‍ಚರಣ್, ಚಿರಂಜಿವಿ

ನವದೆಹಲಿ,ಮಾ.18-ಆರ್‍ಆರ್‍ಆರ್ ಚಿತ್ರದ ನಾಯಕ ರಾಮ್‍ಚರಣ್ ಹಾಗೂ ಅವರ ತಂದೆ ಮೆಗಾಸ್ಟಾರ್ ಚಿರಂಜಿವಿ ಅವರು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿರುವುದು ಕುತೂಹಲ ಕೆರಳಿಸಿದೆ. ಆರ್‍ಆರ್‍ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿಗೆ ಪಾತ್ರವಾಗಿದ್ದು, ಪ್ರಶಸ್ತಿ ಸ್ವೀಕರಿಸಿದ ನಂತರ ಭಾರತಕ್ಕೆ ಹಿಂತಿರುಗಿರುವ ರಾಮ್‍ಚರಣ್ ಅವರು ತಮ್ಮ ತಂದೆ ಚಿರಂಜಿವಿ ಅವರೊಂದಿಗೆ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ರಾಮ್ ಚರಣ್ ಅವರು ಗೃಹ ಸಚಿವರಿಗೆ ಪುಷ್ಪಗುಚ್ಛ ಮತ್ತು ಸಾಂಪ್ರದಾಯಿಕ ರೇಷ್ಮೆ ಶಾಲು ನೀಡಿ ಸ್ವಾಗತಿಸಿದರು. ಅಮಿತ್ ಶಾ […]

ಅದಾನಿ ಗ್ರೂಪ್ ವಿವಾದದಿಂದ ಬಿಜೆಪಿಗೆ ಭಯ ಇಲ್ಲ : ಅಮಿತ್ ಶಾ

ನವದೆಹಲಿ,ಫೆ.14- ಅದಾನಿ ಗ್ರೂಪ್ ವಿವಾದದ ಬಗ್ಗೆ ಬಿಜೆಪಿಗೆ ಮರೆಮಾಚವ ಅಥವಾ ಭಯಪಡಲು ಏನೂ ಇಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಈ ವಿಷಯವನ್ನು ಪರಿಗಣನೆಗೆ ತೆಗೆದುಕೊಂಡಿದೆ. ಸಚಿವನಾಗಿ ನಾನು ಪ್ರತಿಕ್ರಿಯಿಸುವುದು ಸರಿಯಲ್ಲ ಎಂದು ಅಮಿತ್ ಶಾ ಸುದ್ದಿ ಸಂಸ್ಥೆಗೆ ತಿಳಿಸಿದರು. ಕರ್ನಾಟಕದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. ಕಳೆದ 2 ತಿಂಗಳಲ್ಲಿ ನಾನು ರಾಜ್ಯಕ್ಕೆ 5 ಬಾರಿ ಭೇಟಿ ನೀಡಿದ್ದೇನೆ. ನಾನು ರಾಜ್ಯದ ಜನರ ನಾಡಿಮಿಡಿತವನ್ನು ಗ್ರಹಿಸಿದ್ದೇನೆ ಮತ್ತು ಪ್ರಧಾನಿ […]

ಕರ್ನಾಟಕದಲ್ಲಿ ಇಲ್ಲದ ಧಾರ್ಮಿಕ ಸ್ವಾತಂತ್ರ್ಯಕೇರಳದಲ್ಲಿದೆ : ಪಿಣರಾಯಿ

ಕೊಟ್ಟಾಯಂ.ಫೆ.13- ಕೇರಳ ಮೂಲಭೂತವಾದಿಗಳ ಸ್ವರ್ಗವಾಗುತ್ತಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಯಾರು ಯಾವ ಅಪಾಯದಲ್ಲಿದ್ದಾರೆ ಎಂದು ವಿವರಿಸುವಂತೆ ಬಿಜೆಪಿ ನಾಯಕರನ್ನು ಒತ್ತಾಯಿಸಿದ್ದಾರೆ. ಕೊಟ್ಟಾಯಂ ಬಳಿ ಪಕ್ಷದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅಲ್ಪಸಂಖ್ಯಾತರನ್ನು ನಿರಂತರವಾಗಿ ಗುರಿಯಾಗಿಸಲಾಗುತ್ತಿದೆ, ಆದರೆ ಅವರು ಎಡಪಕ್ಷಗಳ ಆಡಳಿತವಿರುವ ಕೇರಳದಲ್ಲಿ ಶಾಂತಿಯುತವಾಗಿ ಬದುಕುತ್ತಿದ್ದಾರೆ ಎಂದು ಹೇಳಿದರು. ಕೇರಳದ ಪರಿಸ್ಥಿತಿ ಎಲ್ಲರಿಗೂ ತಿಳಿದಿದೆ. ಇಲ್ಲಿ ಏನು ತಪ್ಪಾಗಿದೆ […]

ಮುಂದಿನ 3 ತಿಂಗಳೊಳಗೆ 2 ಲಕ್ಷ ಪ್ರಾಥಮಿಕ ಡೈರಿಗಳ ಸ್ಥಾಪನೆ : ಅಮಿತ್ ಷಾ

ಗೆಜ್ಜಲೆಗೆರೆ(ಮದ್ದೂರು),ಡಿ.30- ಮುಂದಿನ ಮೂರು ತಿಂಗಳ ಒಳಗೆ ರಾಜ್ಯದ ಪ್ರತಿ ಗ್ರಾಮಪಂಚಾಯ್ತಿಯಲ್ಲೂ ಎರಡು ಲಕ್ಷ ಪ್ರಾಥಮಿಕ ಡೇರಿಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಷಾ ಪ್ರಕಟಿಸಿದ್ದಾರೆ. ಮನ್ಮುಲ್ ವತಿಯಿಂದ ನೂತನವಾಗಿ ನಿರ್ಮಿಸಲಾದ 264 ಕೋಟಿ ವೆಚ್ಚದ ಮೆಗಾ ಡೇರಿ ಉದ್ಘಾಟಿಸಿ ಮಾತನಾಡಿದ ಅವರು, ಎನ್ಡಿಡಿಬಿ ಮೂಲಕ ರಾಜ್ಯದ ಎಲ್ಲ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಮೂರು ತಿಂಗಳೊಳಗೆ ಪ್ರಾಥಮಿಕ ಡೇರಿಗಳನ್ನು ಸ್ಥಾಪನೆ ಮಾಡ ಲಾಗುವುದು. ಇದರಿಂದ ರೈತರ ಬದುಕು ಹಸನಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಮುಂದಿನ […]