ಪಿಎಸ್‍ಐ ನೇಮಕಾತಿ ಅಕ್ರಮ : ಅಮೃತ್‍ಪೌಲ್ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ

ಬೆಂಗಳೂರು, ಡಿ.3- ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ರಾಜ್ಯ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಪೌಲ್ ವಿರುದ್ಧ ಸಿಐಡಿ ಪೊಲೀಸರು 1406 ಪುಟಗಳ ಹೆಚ್ಚುವರಿ ಚಾರ್ಜ್‍ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪೈಕಿ 38 ಸಾಕ್ಷಿದಾರರ ಹೇಳಿಕೆ, 78 ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದರು. ಅಮೆರಿಕಾಗೂ ಕಾಡುತ್ತಿದೆ ಚೀನಾದ ಟಿಕ್‍ಟಾಕ್ ಭಯ ಪಿಎಸ್‍ಐ […]

ಸಿಐಡಿಯಿಂದ ಮತ್ತೆ ಅಮೃತ್ ಪೌಲ್ ವಿಚಾರಣೆ

ಬೆಂಗಳೂರು,ನ.16- ಪಿಎಸ್ಐ ಅಕ್ರಮ ನೇಮಕಾತಿ ಸಂಬಂಧ ಸದ್ಯ ಜೈಲು ಪಾಲಾಗಿರುವ ಎಡಿಜಿಪಿ ಅಮೃತ್ ಪೌಲ್ ಅವರನ್ನು ಸಿಐಡಿ ಪುನಃ ತನಿಖೆಗೆ ಒಳಪಡಿಸಿದೆ. ಸಿಐಡಿಯ ಡಿವೈಎಸ್ಪಿ ಅಂಜುಮಾನ್ ನೇತೃತ್ವದಲ್ಲಿ ಸಿಐಡಿಯಕೇಂದ್ರ ಕಚೇರಿ ಕಾರ್ಟಲ್ ಭವನದಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಪ್ರಕರಣ ಕುರಿತು ಮಾಹಿತಿ ಪಡೆದರು. ಈ ಹಿಂದೆಯೂ ಸಿಐಡಿ ತನಿಖಾ ತಂಡ ಅಮೃತ್ ಪೌಲ್ ಅವರನ್ನು ಎರಡು ಬಾರಿ ವಿಚಾರಣೆ ನಡೆಸಿತ್ತು. ಇತ್ತೀಚೆಗಷ್ಟೇ ಈ ಪ್ರಕರಣದ ಆರೋಪಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. […]