ನಕ್ಷತ್ರ ಆಮೆಗಳ ಕಳ್ಳಸಾಗಣಿಕೆ, ಓರ್ವನ ಬಂಧನ, 250 ಆಮೆಗಳ ರಕ್ಷಣೆ

ಹೈದರಾಬಾದ್,ಫೆ.5- ಅಳವಂಚಿನನಲ್ಲಿರುವ ನಕ್ಷತ್ರ ಆಮೆಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಒಬ್ಬನನ್ನು ಬಂಧಿಸಿರುವ ಎಸ್‍ಇಬಿ( ಆಂಧ್ರಪ್ರದೇಶ ಸ್ಪೆಷಲ್ ಎನ್‍ಫೋರ್ಸ್‍ಮೆಂಟ್ ಬ್ಯೂರೊ) ಅಧಿಕಾರಿಗಳು 250 ಆಮೆಗಳನ್ನು ರಕ್ಷಿಸಿದ್ದಾರೆ. ಸೆಲ್ವಕುಮಾರ್ ಬಂಧಿತ ಆರೋಪಿ. ವನ್ಯಜೀವಿ ಸಂರಕ್ಷಣಾ ಕಾಯ್ದೆ, 1974 ರ ಶೆಡ್ಯೂಲ್ 4ರಲ್ಲಿ ಪಟ್ಟಿ ಮಾಡಲಾದ ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಎಸ್‍ಇಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಸೆಲ್ವಕುಮಾರ್ ವಿರುದ್ಧ ವನ್ಯಜೀವಿ (ರಕ್ಷಣೆ) ಕಾಯಿದೆ, 1972ರ ವಿವಿಧ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಲಾಗಿದೆ.