ಆಂಧ್ರದ ಸಚಿವ ಗೌತಮ್‍ರೆಡ್ಡಿ ವಿಧಿವಶ

ಅಮರಾವತಿ,ಫೆ.21- ಆಂಧ್ರಪ್ರದೇಶದ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಮೆಕಪಾಟಿ ಗೌತಮ್ ರೆಡ್ಡಿ ಅವರು ಇಂದು ಬೆಳಗ್ಗೆ ಹೈದರಾಬಾದ್‍ನಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಅವರ ನಿಟಕವರ್ತಿಯೊಬ್ಬರು ತಿಳಿಸಿದ್ದಾರೆ.50 ವರ್ಷ ವಯಸ್ಸಿನ ರೆಡ್ಡಿ ಅವರು, ಪತ್ನಿ, ಓರ್ವ ಪುತ್ರಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ. ಗೌತಮ್ ರೆಡ್ಡಿ ಅವರು ದುಬೈನಲ್ಲಿ 10 ದಿನಗಳನ್ನು ಕಳೆದ ತರುವಾಯ ಎರಡು ದಿನಗಳ ಹಿಂದೆಯಷ್ಟೇ ಹೈದಾರಾಬಾದ್‍ಗೆ ಹಿಂತಿರುಗಿದ್ದರು. ದುಬೈ ಎಕ್ಸ್ ಪೋನಲ್ಲಿ ಆಂಧ್ರ ಪ್ರದೇಶದ ಕೈಗಾರಿಕಾ ಇಲಾಕೆ ರಾಜ್ಯಕ್ಕೆ ಹೂಡಿಕೆದಾರರನ್ನು ಆಕರ್ಷಿಸುವುದಕ್ಕಾಗಿ ಮಳಿಗೆಯೊಂದನ್ನು […]