ಪಶುಸಂಗೋಪನಾ ಸಚಿವರ ವಿರುದ್ಧ ವಿಪಕ್ಷ ವಾಗ್ದಾಳಿ

ಬೆಂಗಳೂರು, ಮಾ.9- ಪಶುಸಂಗೋಪನಾ ಸಚಿವರು ಕೆಲಸ ಮಾಡದೆ ಇದ್ದರೂ ಎಲ್ಲವನ್ನೂ ನಾನೇ ಮಾಡಿದ್ದೇನೆ. ಎಲ್ಲವೂ ನನಗೆ ಗೋತ್ತು ಎಂಬ ದರ್ಪ ಪ್ರದರ್ಶನ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿದರೆ, ಆಡಳಿತ ಪಕ್ಷದ ಸದಸ್ಯರು ಸಚಿವರ ವಿರುದ್ಧ ಅಸಮದಾನ ಪ್ರದರ್ಶನ ಮಾಡಿದ್ದ ಪ್ರಸಂಗ ವಿಧಾನ ಪರಿಷತ್ ನಲ್ಲಿ ನಡೆಯಿತು. ಪ್ರಶ್ನೋತ್ತರದ ವೇಳೆ ಬಿಜೆಪಿಯ ಸದಸ್ಯ ಸುನೀಲ್ ವಲ್ಯಾಪುರ್. ರಾಜ್ಯದಲ್ಲಿ ಮಂಜೂರಾದ ಒಟ್ಟು ಪಶುವೈದ್ಯಾಕಾರಿಗಳ ಸಂಖ್ಯೆ ಎಷ್ಟು, ಎಷ್ಟು ಜನ ಕೆಲಸ ಮಾಡುತ್ತಿದ್ದಾರೆ, ಖಾಲಿ ಎಷ್ಟಿವೆ […]