ಕೇಸರಿ ಪಡೆಗೆ ತಲೆ ನೋವಾದ ಕ್ರಿಶ್ಚಿಯನ್ ಶಾಸಕರ ವಲಸೆ

ಪಣಜಿ, ಜ.11- ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಕ್ರಿಶ್ಚಿಯನ್ ಸಮುದಾಯದ ಶಾಸಕರು ಬಿಜೆಪಿ ತೊರೆಯುತ್ತಿರುವುದು ಕೇಸರಿ ಪಡೆಗೆ ತಲೆ ನೋವಾಗಿ ಪರಿಣಮಿಸಿದೆ. ಗೋವಾ ವಿಧಾನಸಭೆಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ. ಆಡಳಿತಾರೂಢ ಬಿಜೆಪಿ ಮತ್ತೆ ಮರಳಿ ಅಧಿಕಾರ ಹಿಡಿಯುವ ಕೆಚ್ಚೆದೆ ಪ್ರದರ್ಶನ ಮಾಡುತ್ತಿದೆ. ಆದರೂ ಒಬ್ಬರಾದ ಮೇಲೆ ಒಬ್ಬರಂತೆ ಕ್ರಿಶ್ಚಿಯನ್ ಸಮುದಾಯದ ಶಾಸಕರು ಬಿಜೆಪಿ ತೊರೆಯುತ್ತಿರುವುದು ಮಂಕು ಕವಿದಂತೆ ಮಾಡಿದೆ. ಕಲಾಂಗುಟೆ ಕ್ಷೇತ್ರದ ಶಾಸಕ ಹಾಗೂ ಸಚಿವ ಮೈಕೆಲ್ ಲೋಬೋ ಅವರು ಸೋಮವಾರ ಬಿಜೆಪಿ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ […]