ಅಫ್ತಾಬ್‍ಗೆ ಮಂಪರು ಪರೀಕ್ಷೆ : ಹೇಳಿಕೆ ಖಚಿತತೆಗೆ ತನಿಖೆ

ನವದೆಹಲಿ,ಡಿ.2- ಶ್ರದ್ದಾ ವಾಲ್ಕರ್ ಹತ್ಯೆಯ ಆರೋಪಿ ಅಫ್ತಾಬ್ ಪೂನಾವಾಲ ಮಂಪರು ಪರೀಕ್ಷೆಯಲ್ಲಿ ನೀಡಿರುವ ಹೇಳಿಕೆಗಳ ಖಚಿತತೆ ದೃಢಪಡಿಸಿಕೊಳ್ಳಲು ತನಿಖಾಧಿಕಾರಿಗಳು ಮರು ವಿಚಾರಣೆ ನಡೆಸಿದ್ದಾರೆ. ಪ್ರಕರಣದ ತನಿಖಾಧಿಕಾರಿಯೊಂದಿಗೆ ವಿಧಿವಿಜ್ಞಾನ ಪ್ರಯೋಗಾಲಯದ ನಾಲ್ವರು ಅಧಿಕಾರಿಗಳ ತಂಡ ಕೇಂದ್ರ ಕಾರಾಗೃಹಕ್ಕೆ ತೆರಳಿ ಆರೋಪಿ ಅಫ್ತಾಬ್‍ನನ್ನು ಮಂಪರು ಪರೀಕ್ಷೋತ್ತರ ವಿಚಾರಣೆಗೆ ಒಳಪಡಿಸಿದ್ದಾರೆ. ಅಫ್ತಾಬ್‍ಗೆ ನ್ಯಾಯಾಲಯದ ನಿರ್ದೇಶನದ ಮೇರೆಗೆ ಗುರುವಾರದವರೆಗೆ ಯಶಸ್ವಿ ಮಂಪರು ಪರೀಕ್ಷೆ ನಡೆಸಲಾಗಿದೆ. ಶ್ರದ್ದಾ ಕೊಲೆ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದ್ದು, ಆರೋಪಿಯ ಕ್ರೂರತೆ ಚರ್ಚೆಗೆ ಗ್ರಾಸವಾಗಿದೆ. ಗಡಿ ಭಾಗದಲ್ಲಿ ಮರಾಠಿ ಶಾಲೆ […]