ಆಡಳಿತ ವಿರೋಧಿ ಅಲೆ : ಬಿಜೆಪಿ ಶಾಸಕರಿಗೂ ಟಿಕೆಟ್ ತಪ್ಪುವ ಭೀತಿ

ಬೆಂಗಳೂರು,ಫೆ.25- ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ದಿನ ಕಳೆದಂತೆ ಕಾವು ಹೆಚ್ಚಾಗುತ್ತಿದ್ದಂತೆ ಆಡಳಿತಾರೂಢ ಬಿಜೆಪಿಯಲ್ಲಿ ಶಾಸಕರಿಗೆ ಡವ ಡವ ಆರಂಭವಾಗಿದೆ. ಏಕೆಂದರೆ ಗೆದ್ದಿರುವ ಎಲ್ಲಾ ಶಾಸಕರಿಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಕಾತರಿಯನ್ನು ಪಕ್ಷ ನೀಡಿಲ್ಲ. ಸಹಜವಾಗಿ ಇದು ಅನೇಕ ಶಾಸಕರಿಗೆ ತಳಮಳ ಉಂಟು ಮಾಡಿದ್ದು, ಎಲ್ಲಿ ಟಿಕೆಟ್ ಕೈ ತಪ್ಪಲಿದೆಯೋ ಎಂಬ ದುಗುಡ ಕಾಡುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಸ್ಪಷ್ಟಪಡಿಸಿರುವಂತೆ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಉಳಿದಂತೆ 2018 ಹಾಗೂ ನಂತರ ನಡೆದ ಉಪಚುನಾವಣೆಯಲ್ಲಿ […]