ಬಿಜೆಪಿ ಟಿಕೆಟ್ ವಿಚಾರ : ಹಳಬರಿಗೆ ಕೋಕ್, RSS ನಿಷ್ಠರಿಗೆ ಲಕ್

ಬೆಂಗಳೂರು,ಮಾ.8- ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಆಡಳಿತಾರೂಢ ಬಿಜೆಪಿಯ 6 ಮಂದಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದ್ದು, ಹೊಸ ಮುಖಗಳಿಗೆ ಮಣೆ ಹಾಕಲು ಚಿಂತನಮಂಥನ ನಡೆದಿದೆ. ಕೊನೆ ಚುನಾವಣೆಯ ಹೊಸ್ತಿಲಿನಲ್ಲಿರುವ ಮಾಜಿ ಸಚಿವ ಕೆ.ಎಸ್.ಈಶ್ವಪ್ಪ (ಶಿವಮೊಗ್ಗ), ಶಾಸಕರಾದ ಎಂ.ಪಿ.ಕುಮಾರಸ್ವಾಮಿ(ಮೂಡಿಗೆರೆ), ಬಸವರಾಜ ದಡೆಸೂರು(ಕನಕಗಿರಿ), ನೆಹರು ಓಲೇಕಾರ್(ಹಾವೇರಿ), ಮಾಡಾಳ್ ವಿರೂಪಾಕ್ಷಪ್ಪ(ಚನ್ನಗಿರಿ) ಹಾಗೂ ಕೆ.ಸಿ.ನಾರಾಯಣಗೌಡ(ಕೆ.ಆರ್.ಪೇಟೆ) ಅವರುಗಳಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ. ಈಗಾಗಲೇ ಬಿಜೆಪಿಯು ದೆಹಲಿ ಮೂಲದ ಖಾಸಗಿ ಸಂಸ್ಥೆಯಿಂದ ಐದು ಬಾರಿ ಈ ಕ್ಷೇತ್ರಗಳಲ್ಲಿ ಸಮೀಕ್ಷೆ […]