ಪ್ರತಿ ವರ್ಷ ನಾನು ಭಾರತಕ್ಕೆ ಹೋಗಲು ಬಯಸುತ್ತೇನೆ : ಅನುಷ್ಕಾ ಸುನಕ್

ಲಂಡನ್,ನ.26- ಭಾರತದಲ್ಲಿ ಕುಟುಂಬವಿದೆ. ಮನೆ ಮತ್ತು ಸಂಸ್ಕøತಿಗಳು ಜೊತೆಯಾಗಿವೆ. ಪ್ರತಿ ವರ್ಷ ನಾನು ಅಲ್ಲಿಗೆ ಹೋಗಲು ಬಯಸುತ್ತೇನೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪುತ್ರಿ ಅನುಷ್ಕಾ ಸುನಕ್ ಹೇಳಿದ್ದಾರೆ. ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ರಂಗ್-2022 ಕಾರ್ಯಕ್ರಮದಲ್ಲಿ ಕೂಚುಪುಡಿ ನೃತ್ಯ ಪ್ರದರ್ಶನ ಮಾಡಿದ ಅನುಷ್ಕಾ ಸುನಕ್ ಭಾರತೀಯ ಸಂಸ್ಕøತಿಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾಳೆ. ನನ್ನ ಕುಟುಂಬ ಭಾರತ ಮೂಲದಿಂದ ಬಂದಿದೆ. ನಾನು ಕೂಚುಪುಡಿ ಮತ್ತು ನೃತ್ಯವನ್ನು ಪ್ರೀತಿಸುತ್ತೇನೆ. ನೃತ್ಯ ಪ್ರದರ್ಶನದ ವೇಳೆ ನಮ್ಮೆಲ […]