ರಷ್ಯಾದ ಯುದ್ಧ ವಿಮಾನ ಪತನ, 4 ಮಂದಿ ಸಾವು

ಮಾಸ್ಕೋ.ಅ,18- ರಷ್ಯಾದ ಯುದ್ಧ ವಿಮಾನವೊಂದು ಹಾರಾಟದ ವೇಳೆ ಇಂಜಿನ್ ವೈಫಲ್ಯಗೊಂಡು ಅಜೋವ್ ಸಮುದ್ರ ತೀರದ ವಸತಿ ಪ್ರದೇಶ ಬಳಿ ಪತನಗೊಂಡು ನಾಲ್ವರು ಸಾವನ್ನಪ್ಪಿದ್ದಾರೆ. ತರಬೇತಿ ಕಾರ್ಯಾಚರಣೆಗಾಗಿ ಟೇಕ್‍ಆಫ್‍ನ ಸಮಯದಲ್ಲಿ ಅದರ ಎಂಜಿನ್‍ಗಳಲ್ಲಿ ಒಂದಕ್ಕೆ ಬೆಂಕಿ ಹೊತ್ತಿಕೊಂಡ ನಂತರ ಎಸ್‍ಯು -34 ಬಾಂಬರ್ ಬಂದರು ನಗರವಾದ ಯೆಸ್ಕ್‍ನಲ್ಲಿ ಪತನಗೊಂಡಿದೆ. ವಿಮಾನ ಬಂದ ರಭಸಕ್ಕೆ ಭಾರೀ ಬೆಂಕಿಯಿಂದ ತಪ್ಪಿಸಿಕೊಳ್ಳಲು ಆಪಾರ್ಟ್‍ಮೆಂಟ್‍ನ 9 ನೇ ಮಹಡಿಯಿಂದ ಜಿಗಿದ ಮೂವರು ಕಳಗೆ ಬಿದ್ದು ಸಾವನ್ನಪ್ಪಿದರೆ ಮತ್ತೊಬ್ಬ ಬೆಂಕಿಗೆ ಆಹುತಿಯಾಗಿದ್ದಾನೆ. ಇಬ್ಬರು ಪೈಲೆಟ್‍ಗಳು ಸುರಕ್ಷಿತವಾಗಿ […]