“ಸರ್ಕಾರ ಮಾರುಕಟ್ಟೆ ವ್ಯವಹಾರಗಳ ಅಧಿನಿಯಮವನ್ನು ಹಿಂಪಡೆಯುವುದಿಲ್ಲ”

ಬೆಂಗಳೂರು,ಫೆ.15- ರಾಜ್ಯ ಸರ್ಕಾರ ತಿದ್ದುಪಡಿ ಮಾಡಿ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರಗಳ ಅಧಿನಿಯಮವನ್ನು ಹಿಂಪಡೆಯುವುದಿಲ್ಲ. ನಷ್ಟದಲ್ಲಿರುವ ಎಪಿಎಂಸಿಗಳು ವಿಲೀನಕ್ಕೆ ಪ್ರಸ್ತಾವನೆ ಬಂದರೆ ಅದನ್ನು ಪರಿಶೀಲಿಸುವುದಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಭರವಸೆ ನೀಡಿದರು. ವಿಧಾನಪರಿಷತ್‍ನ ಪ್ರಶ್ನೋತ್ತರ ಅವಯಲ್ಲಿ ಸದಸ್ಯ ಹರೀಶ್‍ಕುಮಾರ್ ಅವರು , ಎಪಿಎಂಸಿಗಳಲ್ಲಿ ಒಂದು ರೂ. 40 ಪೈಸೆ ಶುಲ್ಕ ಸಂಗ್ರಹಿಸಲಾಗುತ್ತಿದ್ದು, ಆಗ ಪುತ್ತೂರು ಎಂಪಿಸಿಗೆ 7 ಕೋಟಿ ಆದಾಯ ಬರುತ್ತಿತ್ತು. ಶುಲ್ಕವನ್ನು 60 ಪೈಸೆಗೆ ಇಳಿಸಿದ ಮೇಲೆ ನಾಲ್ಕೈದು ಕೋಟಿ ರೂ.ನಷ್ಟು ತೆರಿಗೆ ಸಂಗ್ರಹವಾಗಿದೆ. […]