ರೈತರು-ವರ್ತಕರೇ ಟಾರ್ಗೆಟ್; ಮೂವರು ದರೋಡೆಕೋರರ ಸೆರೆ

ಬೆಂಗಳೂರು,ಜ.4-ರೈತರು ಮತ್ತು ವರ್ತಕರನ್ನೆ ಗುರಿಯಾಗಿರಿಸಿಕೊಂಡು ನೆಲಮಂಗಲ ಸುತ್ತಮುತ್ತಲಿನ ಎಪಿಎಂಸಿ ಮಾರುಕಟ್ಟೆಗಳಲ್ಲಿ ದರೋಡೆ ಮಾಡುತ್ತಿದ್ದ ಮೂವರನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಜಾನ್ಸನ್, ರಾಜ ಮತ್ತು ಸತ್ಯವೇಲು ಬಂತ ಆರೋಪಿಗಳು. ಇನ್ನಿಬ್ಬರು ತಲೆಮರೆಸಿಕೊಂಡಿದ್ದು ಬಂಧನ ಕಾರ್ಯ ಮುಂದುವರೆದಿದೆ. ಮುಂಜಾನೆ 1ಗಂಟೆಯಿಂದ 3 ಗಂಟೆ ಮಧ್ಯೆ ಎಪಿಎಂಸಿ ಮಾರುಕಟ್ಟೆಗೆ ಬರುವ ರೈತರು ಹಾಗೂ ವರ್ತಕರಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ ಆಭರಣ ಹಾಗೂ ಹಣ ದೋಚಿ ದರೋಡೆಕೋರರು ಪರಾರಿಯಾಗುತ್ತಿದ್ದರು. ಈ ಬಗ್ಗೆ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‍ಸ್ಪೆಕ್ಟರ್ […]