ರಾಹುಲ್‍ ಗಾಂಧಿ ಕ್ಷಮೆಗೆ ಒತ್ತಾಯಿಸುವುದು ಪ್ರತಿಯೊಬ್ಬ ಸಂಸದರ ಕರ್ತವ್ಯ : ಕಿರಣ್‍ ರಿಜಿಜು

ನವದೆಹಲಿ,ಮಾ.16- ವಿದೇಶದಲ್ಲಿ ಭಾರತದ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿರುವ ರಾಹುಲ್‍ಗಾಂಧಿಯವರು ಸಂಸತ್‍ನಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸುವುದು ಪ್ರತಿಯೊಬ್ಬ ಸಂಸದರ ಕರ್ತವ್ಯ ಎಂದು ಕೇಂದ್ರ ಕಾನೂನು ಸಚಿವ ಕಿರಣ್‍ರಿಜಿಜು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ವಿರೋಧಿ ಶಕ್ತಿಗಳು ವಿದೇಶದಲ್ಲಿ ಭಾರತವನ್ನು ದೂಷಿಸಲು ಸಂಚು ರೂಪಿಸಿವೆ. ರಾಹುಲ್ ಗಾಂಯವರ ಭಾಷೆಯನ್ನೇ ಅವರ ಗ್ಯಾಂಗ್ ಮಾತನಾಡುತ್ತಿದೆ. ಕಾಂಗ್ರೆಸ್ ಪಕ್ಷ ರಾಹುಲ್‍ಗಾಂಧಿ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದಾದರೆ ಅದಕ್ಕೆ ಸಂಸತ್ತಿನಲ್ಲಿ ಜನರನ್ನು ಪ್ರತಿನಿಸುವ ಅರ್ಹತೆ ಇಲ್ಲ ಎಂದು ಕಿಡಿಕಾರಿದರು. ಕಾಂಗ್ರೆಸ್ ಪಕ್ಷ ಈಗಾಗಲೇ ತನ್ನ […]