ಔರಂಗಬಾದ್, ಉಸ್ಮಾನಬಾದ್ ಹೆಸರು ಬದಲಾವಣೆಗೆ ಕೇಂದ್ರ ಸಮ್ಮತಿ

ಮಹಾರಾಷ್ಟ್ರ,ಫೆ.25 – ಔರಂಗಬಾದ್ ನಗರವನ್ನು ಛತ್ರಪತಿ ಶಿವಾಜಿ ನಗರವೆಂದು ಮತ್ತು ಉಸ್ಮಾನಬಾದ್ ನಗರವನ್ನು ಧಾರಶಿವ್ ಎಂದು ಮರುನಾಮಕರಣ ಮಾಡುವುದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಬಗ್ಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೆಂದ್ರ ಪಡ್ನವೀಸ್ ಅವರು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ.ಔರಂಗಬಾದ್ ಎಂಬ ಹೆಸರು ಮೊಘಲ್ ರಾಜ ಔರಂಗಜೇಬನಿಂದ ಬಂದಿದ್ದು, ಉಸ್ಮಾನ ಬಾದ್ ಹೆಸರು ಕೂಡಾ ಮೊಘಲ್ ರಾಜನೊಬ್ಬನಿಂದ ಬಂದಿದೆ. ಈ ಹೆಸರುಗಳನ್ನು ಛತ್ರಪತಿ ಶಿವಾಜಿ ಮತ್ತು ಧಾರಶಿವ ಎಂದು ಬದಲಾಯಿಸಬೇಕೆಂದು ಬಲ ಪಂಥೀಯ ಸಂಘಟನೆಗಳು ಹಲವಾರು ವರ್ಷಗಳಿಂದ ಬೇಡಿಕೆ ಇಟ್ಟಿದ್ದವು. […]

ದೆಹಲಿ ಡಿಸಿಎಂ ಅಮೇರಿಕಾ ಪ್ರವಾಸಕ್ಕೆ ಅನುಮತಿ

ನವದೆಹಲಿ,ಫೆ.3 – ಅಮ್ ಆದ್ಮಿಯ ದೆಹಲಿ ಸರ್ಕಾರದ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರ ಅಮೇರಿಕಾ ಪ್ರವಾಸಕಕ್ಕೆ ಲೆ.ಗವರ್ನರ್ ವಿ.ಕೆ.ಸಕ್ಸೇನಾ ತಾದ್ವಿಕ ಅನುಮೋದನೆ ನೀಡಿದ್ದು, ಪ್ರವಾಸದ ಖರ್ಚು-ವೆಚ್ಚವನ್ನು ಯಾರೂ ಭರಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಅಮೇರಿಕಾದ ಟೆಸೋಲ್‍ನಲ್ಲಿ ನಡೆಯುವ ಶೈಕ್ಷಣಿಕ ಸಮಾವೇಶದಲ್ಲಿ ಅಕಾರಿಗಳ ನಿಯೋಗದೊಂದಿಗೆ ಭಾಗವಹಿಸಲು ಸಿಸೋಡಿಯಾ ಅವರಿಗೆ ಅನುಮತಿ ನೀಡುವಂತೆ ದೆಹಲಿ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ವಿ.ಕೆ ಸಕ್ಸೇನಾ ಅನುಮತಿ ನೀಡಿದ್ದಾರೆ. ಆದರೆ ಪ್ರಸ್ತಾವನೆಯಲ್ಲಿ ಪ್ರವಾಸದ ವೆಚ್ಚವನ್ನು ಮನೀಷ್ ಸಿಸೋಡಿಯ ಮತ್ತುಟೆಸೋಲ್ ಸಂಸ್ಥೆ ಭರಿಸಲಿದೆ ಎಂದು ನಮೋದಿಸಲಾಗಿದೆ […]

ಮುಕ್ತ ಮಾರುಕಟ್ಟೆಗೆ 30 ಲಕ್ಷ ಮೆಟ್ರಿಕ್‍ಟನ್ ಗೋದಿ ಬಿಡುಗಡೆ

ನವದೆಹಲಿ, ಜ.26- ದೇಶದಲ್ಲಿ ಗೋ ಮತ್ತು ಅದರ ಹಿಟ್ಟಿನ ಬೆಲೆ ಹೆಚ್ಚುತ್ತಿದೆ. ಬೆಲೆ ಏರಿಕೆ ತಪ್ಪಿಸಲು ಕೇಂದ್ರ ಸರ್ಕಾರದ ದಾಸ್ತಾನಿನಲ್ಲಿರುವ 30 ಲಕ್ಷ ಮೆಟ್ರಿಕ್ ಟನ್ ಗೋದಿಯನ್ನು ಮುಕ್ತ ಮಾರುಕಟ್ಟೆ ಯೋಜನೆಯಡಿ ಬಿಡುಗಡೆ ಮಾಡಲು ಮುಂದಾಗಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಮುಂದಿನ ಎರಡು ತಿಂಗಳೊಳಗೆ ಭಾರತೀಯ ಆಹಾರ ನಿಗಮ (ಎಫ್‍ಸಿಐ) ಕೇಂದ್ರೀಯ ದಾಸ್ತಾನಿನಿಂದ 30 ಲಕ್ಷ ಮೆಟ್ರಿಕ್ ಟನ್ ಗೋಯನ್ನು ಮುಕ್ತ ಮಾರುಕಟ್ಟೆಗೆ ತರುವ […]

BIG NEWS: ಕಳಸಾ-ಬಂಡೂರಿ ನಾಲಾ ಯೋಜನೆಯ ಕೇಂದ್ರ ಗ್ರೀನ್ ಸಿಗ್ನಲ್

ಬೆಂಗಳೂರು, ಡಿ.29- ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆಯ ಕಳಸಾ-ಬಂಡೂರಿ ನಾಲಾ ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರು ಇಂದು ಟ್ವಿಟ್ ಮಾಡಿದ್ದು, ಕಳಸಾ-ಬಂಡೂರಿ ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ. ಕರ್ನಾಟಕಕ್ಕೆ ಅತ್ಯಂತ ಆವಶ್ಯಕವಾದ ಈ ಯೋಜನೆಗೆ ಅನುಮೋದನೆ ದೊರೆಯಲು ಸಹಕರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ […]

ಉಡುಪಿ, ತುಮಕೂರಿನಲ್ಲಿ ESI ಆಸ್ಪತ್ರೆ ತೆರೆಯಲು ಕೇಂದ್ರ ಅಸ್ತು

ನವದೆಹಲಿ,ಜು.15- ಕರ್ನಾಟಕದ ಉಡುಪಿ ಮತ್ತು ತುಮಕೂರಿನಲ್ಲಿ 100 ಹಾಸಿಗೆ ಸಾಮಥ್ರ್ಯವುಳ್ಳ ಎರಡು ಇಎಸ್‍ಐ ಆಸ್ಪತ್ರೆಯನ್ನು ತೆರೆಯಲು ಕೇಂದ್ರ ಸರ್ಕಾರ ಇಂದು ತಾತ್ವಿಕ ಅನುಮೋದನೆ ನೀಡಿದೆ. ಉಡುಪಿ ಹಾಗೂ ತುಮಕೂರಿನಲ್ಲಿ ಸುಮಾರು ನೂರು ಹಾಸಿಗೆ ಸಾಮಥ್ರ್ಯ ಈ ಎರಡೂ ಆಸ್ಪತ್ರೆಗಳನ್ನು ಆರಂಭಿಸಲು ಅಗತ್ಯವಿರುವ ಜಮೀನುಗಳನ್ನು ಒದಗಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ತೆಗೆದಕೊಳ್ಳಬೇಕೆಂದು ಕೇಂದ್ರದ ಕಾರ್ಮಿಕ ಇಲಾಖೆ ಸೂಚನೆ ನೀಡಿದೆ. ದೇಶಾದ್ಯಂತ ಕಾರ್ಮಿಕ ಇಲಾಖೆ ವತಿಯಿಂದ 23 ಇಎಸ್‍ಐ ಆಸ್ಪತ್ರೆಗಳನ್ನು ತೆರೆಯಲು ಕಳೆದ ತಿಂಗಳು ಕೇಂದ್ರ ಸಚಿವ ಸಂಪುಟ […]