ಓಲಾ, ಊಬರ್ ರದ್ದುಗೊಳಿಸಲು ಆಟೋ ಚಾಲಕರ ಆಗ್ರಹ

ಬೆಂಗಳೂರು,ಅ.11- ಓಲಾ, ಉಬರ್, ರಾಪಿಡೋ ಸಂಸ್ಥೆಗಳಿಂದ ಆಟೋ ಚಾಲಕರ ಜೀವನಕ್ಕೆ ಕುತ್ತು ತಂದಿದ್ದು, ವಾರದೊಳ ಗಾಗಿ ಅನಧಿಕೃತ ಆ್ಯಪ್ಗಳನ್ನು ರದ್ದುಗೊಳಿಸಿ ಸರ್ಕಾರ ದಿಂದಲೇ ನೂತನ ಆ್ಯಪ್ ಜಾರಿಗೆ ತಂದು ಆಟೋ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಮಾಡಿ ಕೊಡಬೇಕೆಂದು ಬೆಂಗಳೂರು ಆಟೋ ಚಾಲಕರ ಸಂಘಸಂಸ್ಥೆ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅಧ್ಯಕ್ಷ ಎಮ್. ಮಂಜುನಾಥ್, ಸರ್ಕಾರ ಈ ಬಗ್ಗೆ ಗಮನಹರಿಸಿ ಜನಸ್ನೇಹಿ , ಚಾಲಕ ಸ್ನೇಹಿ ಆ್ಯಪ್ನ್ನು ಅಭಿವೃದ್ಧಿಪಡಿಸಿ ಸಹಕಾರಿ ತತ್ವದಡಿ ನಡೆಸಬೇಕು , ಇಲ್ಲದಿದ್ದಲ್ಲಿ […]