ಅರಸೀಕೆರೆ ಬಳಿ ಭೀಕರ ಸರಣಿ ಅಪಘಾತ, 4 ಮಕ್ಕಳು ಸೇರಿ 9 ಮಂದಿ ಸಾವು..!

ಅರಸೀಕೆರೆ, ಅ.16- ಟೆಂಪೋ ಟ್ರಾವೆಲರ್, ಹಾಲಿನ ಟ್ಯಾಂಕರ್ ಹಾಗೂ ಕೆಎಸ್‍ಆರ್‍ಟಿಸಿ ಬಸ್ ನಡುವೆ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ನಾಲ್ವರು ಮಕ್ಕಳು ಸೇರಿದಂತೆ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಬಾಣಾವರ ಸಮೀಪದ ಗಾಂಧಿನಗರದ ಬಳಿ ನಡೆದಿದೆ. ಹಳ್ಳಿಕೆರೆ ಗ್ರಾಮದ ಲೀಲಾವತಿ (50), ಚೈತ್ರಾ (33), ಸಮರ್ಥ (10), ಡಿಂಪಿ (12), ತನ್ಮಯ್ (10), ಧ್ರುವ (2), ವಂದನಾ (20), ದೊಡ್ಡಯ್ಯ (60), ಭಾರತಿ (50) ಮೃತಪಟ್ಟ ದುರ್ದೈವಿಗಳು. ಹಳ್ಳಿಕೆರೆ ಗ್ರಾಮದ 14 ಮಂದಿ […]