ಕೀನ್ಯಾದಲ್ಲಿ ಗುಂಡಿಕ್ಕಿ ಪಾಕ್ ಹಿರಿಯ ಪತ್ರಕರ್ತನ ಹತ್ಯೆ

ಇಸ್ಲಾಮಾಬಾದ್,ಅ.25- ಪಾಕಿಸ್ತಾನದ ಹಿರಿಯ ಪತ್ರಕರ್ತನನ್ನು ಕೀನ್ಯಾದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.ಎಅರ್‍ವೈ ಟಿವಿಯ ಮಾಜಿ ವರದಿಗಾರ ,ನಿರೂಪಕ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೊತೆ ಕಾಣಿಸುತ್ತಿದ್ದ ಅರ್ಷದ್ ಷರೀಫ್( 49) ಹತ್ಯಯಾದ ಪತ್ರಕರ್ತ. ಕಳೆದ ಜನವರಿಯಲ್ಲಿ ಇವರ ವಿರುದ್ದ ದೇಶದ ಭದ್ರತಾ ಏಜೆನ್ಸಿ ದೇಶದ್ರೋಹ ಮತ್ತು ರಾಜ್ಯ ವಿರೋ ನಿರೂಪಣೆಯ ಆರೋಪದ ಮೇಲೆ ಪ್ರಕರಣ ದಾಖಲಿಸಿತ್ತು ನಂತರ ಅವರು ಪತ್ನಿ ಜವೇರಿಯಾ ಸಿದ್ದಿಕ್ ಜೊತೆ ಕೀನ್ಯಾಗೆ ಸ್ಥಳಾಂತರಗೊಂಡಿದ್ದರು. ಷರೀಫ್‍ಅವರ ಸಾವಿನ ಸುದ್ದಿಯನ್ನು ಜವೇರಿಯಾ ಖಚಿತಪಡಿಸಿದ್ದಾರೆ.