ಹೊಸ ಸಂಸತ್ ಭವನದ ಕಂಚಿನ ಲಾಂಛನ ಅನಾವರಣ ಮಾಡಿದ ಪ್ರಧಾನಿ

ನವದೆಹಲಿ,ಜು.11- ನೂತನ ಸಂಸತ್ ಭವನದ ಮೇಲೆ ನಿರ್ಮಿಸಲಾಗಿರುವ 9,500 ಕೆಜಿ ತೂಕದ ಕಂಚಿನ ಲಾಂಛನವನ್ನು ಪ್ರಧಾನಿ ನರೇಂದ್ರಮೋದಿ ಅನಾವರಣ ಮಾಡಿದ್ದಾರೆ. ದೆಹಲಿಯಲ್ಲಿ ನಿರ್ಮಿಸಲಾಗುತ್ತಿರುವ ನೂತನ ಸಂಸತ್ ಭವನದ ಮೇಲೆ ಒಟ್ಟು 9500 ಕೆಜಿ ತೂಕದ ಲಾಂಛನವನ್ನು ಮೋದಿ ಉದ್ಘಾಟಿಸಿದರು. ಇದೇ ವೇಳೆ ಪ್ರಧಾನಿಯವರು ವಿಶೇಷ ಪೂಜೆ ಸಲ್ಲಿಸಿದರು. ನಂತರ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿ ಮತ್ತು ನೌಕರರೊಂದಿಗೆ ಸಮಾಲೋಚನೆ ನಡೆಸಿದರು.