ಪಾಕಿಸ್ತಾನ ತಂಡಕ್ಕೆ ಭಾರತದಿಂದ ಬೆದರಿಕೆ : ಶಾಹಿದ್ ಆಫ್ರಿದಿ

ಚೆನ್ನೈ, ಮಾ. 21- ಐಸಿಸಿ ಆಯೋಜಿಸುವ ಏಷ್ಯಾ ಕಪ್, ಏಕದಿನ ಟೂರ್ನಿಯಲ್ಲಿ ಪಾಕಿಸ್ತಾನ ಹಾಗೂ ಭಾರತ ತಂಡವು ಪಾಲ್ಗೊಳ್ಳುವುದರ ಎದ್ದಿರುವ ವಿವಾದವು ಸಾಕಷ್ಟು ಚರ್ಚೆಗಳಾಗಿರುವ ಸಮಯದಲ್ಲೇ ಪಾಕಿಸ್ತಾನದ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶಾಹಿದ್ ಆಫ್ರಿದಿ ಭಾರತದಿಂದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಬೆದರಿಕೆ ಇದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಏಷ್ಯಾ ಕಪ್ ಆಡಲು ವಿಶ್ವದ ಬೇರೆ ಬೇರೆ ತಂಡಗಳು ಪಾಲ್ಗೊಳ್ಳುತ್ತಿದೆ, ಭಾರತ ತಂಡವು ಟೂರ್ನಿ ಆಡುವ ಮೂಲಕ 2 ದೇಶಗಳ ಸಂಬಂಧ ಉತ್ತಮಗೊಳಿಸಬೇಕೆಂದು ಮನವಿ […]
“ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ ನಾವು ವಿಶ್ವಕಪ್ ಬಹಿಷ್ಕರಿಸಬೇಕಾಗುತ್ತದೆ”

ಇಸ್ಲಮಾಬಾದ್,ನ.26- ಭಾರತ ನಮ್ಮ ದೇಶಕ್ಕೆ ಬಂದು ಆಡದಿದ್ದರೆ ನಾವು ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಗಳನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಪಾಕ್ ಕ್ರಿಕೆಟ್ ಮಂಡಳಿ ಎಚ್ಚರಿಕೆ ನೀಡಿದೆ. ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾ ಕಪ್ ಪಂದ್ಯದಲ್ಲಿ ಭಾರತ ಭಾಗವಹಿಸದಿದ್ದರೆ, ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಗೆ ನಮ್ಮ ತಂಡವನ್ನು ಕಳುಹಿಸುವುದಿಲ್ಲ ಎಂದು ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾ ಎಚ್ಚರಿಸಿದ್ದಾರೆ. ವಿಶ್ವಕಪ್ ಪಂದ್ಯಕ್ಕೂ ಮುನ್ನ ಏಷ್ಯಾ ಕಪ್ ಪಂದ್ಯ ನಡೆಯುವುದರಿಂದ ಪಾಕ್ ಇಂತಹ ತೀರ್ಮಾನಕ್ಕೆ ಬಂದಿದೆ. ನಮ್ಮ ತಂಡ […]
ಏಷ್ಯಾ ಕಪ್ ಪಂದ್ಯದ ಭವಿಷ್ಯ ಬಿಸಿಸಿಐ ನಿರ್ಧರಿಸಲಿದೆ ; ರೋಹಿತ್

ನವದೆಹಲಿ,ಅ.22- ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾ ಕಪ್ ಪಂದ್ಯದಲ್ಲಿ ಭಾರತ ತಂಡ ಭಾಗವಹಿಸುವ ಬಗ್ಗೆ ಬಿಸಿಸಿಐ ನಿರ್ಧರಿಸಲಿದೆ ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ಅಭಿಪ್ರಾಯಪಟ್ಟಿದ್ದಾರೆ. ಸಧ್ಯ ನಾವು ಟಿ-20 ವಿಶ್ವಕಪ್ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿದ್ದೇವೆ. ನಮಗೆ ಮೊದಲು ಕಪ್ ಗೆಲ್ಲುವುದು ಮುಖ್ಯ ಇತರ ಪಂದ್ಯಗಳ ಬಗ್ಗೆ ಬಿಸಿಸಿಐ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. 2023ರಲ್ಲಿ ಪಾಕ್‍ನಲ್ಲಿ ನಡೆಯಲಿರುವ ಏಷ್ಯಾ ಕಪ್ ಪಂದ್ಯದಲ್ಲಿ ಭಾರತ ಭಾಗವಹಿಸುತ್ತಿಲ್ಲ. ಒಂದು ವೇಳೆ ತಟಸ್ಥ ಸ್ಥಳದಲ್ಲಿ ಪಂದ್ಯ ನಡೆದರೆ […]
ಏಷ್ಯಾಕಪ್ ಫೈನಲ್‍ಗೇರಿದ ಭಾರತ ವನಿತೆಯರು

ಸಿಲ್ಹೆಟ್, ಏ. 13- ಭಾರತ ತಂಡದ ಭರವಸೆಯ ಆಟಗಾರ್ತಿ ಶೆಫಾಲಿ ವರ್ಮಾ ( 42 ರನ್, 1 ವಿಕೆಟ್) ರ ಹೋರಾಟದ ಫಲದಿಂದಾಗಿ ಏಷ್ಯಾ ಕಪ್‍ನ ಮೊದಲ ಸೆಮಿಫೈನಲ್‍ನಲ್ಲಿ 74 ರನ್‍ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಹರ್ಮನ್‍ಪ್ರೀತ್ ಕೌರ್ ಪಡೆ ಫೈನಲ್‍ಗೆ ಪ್ರವೇಶಿಸಿದೆ. ಟಾಸ್ ಗೆದ್ದರೂ ಎದುರಾಳಿ ಪಡೆಯನ್ನು ಬ್ಯಾಟಿಂಗ್‍ಗೆ ಆಮಂತ್ರಿಸಿದ ಥೈಯ್ಲಾಂಡ್‍ನ ನಾಯಕಿ ನೂರೆಮೋಲ್ ಚಾಯ್‍ವಾಲ್ ಅವರ ನಿರ್ಣಯ ತಪ್ಪು ಎಂಬುದನ್ನು ಮಹಿಳಾ ಬ್ಯಾಟರ್‍ಗಳು ಆರಂಭದಲ್ಲಿ ತೋರಿಸಿದರು.ಭಾರತದ ಪರ ಆರಂಭಿಕ ಆಟಗಾರ್ತಿಯರಾಗಿ ಕ್ರೀಸ್ಗೆ ಇಳಿದ […]